ಪರಮಾತ್ಮ ನಮ್ಮೋಳಗೆ ಇದ್ದಾನೆ:ಪಡೇಕನೂರಶ್ರೀ

ತಾಳಿಕೋಟೆ:ಮಾ.3:ಭಗವಂತನ ಸ್ಮರಣೆಯನ್ನು ಮಾಡಬೇಕು ಆತನ ದೇವಗುರುವನನ್ನು ನೆನಿಸಬೇಕು ಅದಕ್ಕೆ ಭಕ್ತಿಗೆ ಯೋಗ್ಯಯುಳ್ಳವ ಅಧಿಕಾರ ಉಳ್ಳವ ಎನ್ನುತ್ತಾರೆಂದು ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಸಾಗಿಬಂದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 10ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಶಾಮಃ ಅಂದರೆ ಯೋಗ್ಯ ಮಾನವ ಯೋಗ್ಯ ಧರ್ಮಉಳ್ಳವ ಭಾಗ್ಯರು ಎಂದು ಕರೆಯುತ್ತಾರೆಂದರು. ಅನುರಾಗ ಅಂದರೆ ಪ್ರೀತಿ ಭಗವಂತನ ಮೇಲೆ ಲಿಂಗದ ಮೇಲೆ ಗುರು ದೇವತೆಯ ಮೇಲೆ ಭೂಮಿಯ ಮೇಲೆ ಗಿಡಗಳ ಮೇಲೆ ನಿಸರ್ಗದ ಮೇಲೆ ಎಲ್ಲದರ ಮೇಲೆ ಪ್ರೀತಿ ಇರುವದಕ್ಕೆ ಅನುರಾಗ ಅನ್ನುತ್ತಾರೆಂದರು. ವ್ಯಾಕುಲ ಭೋಗದ ಮೇಲೆ ಸತಿ ಸುತಾಃದ ಮೇಲೆ ನಾನು ನನ್ನದು ಅನ್ನುದರ ಮೇಲೆ ವ್ಯಾಕುಲಹ ಇದಕ್ಕೆ ಸಂಸಾರವೆಂದು ಕರೆದರು. ರಾಗ ಬೇರೆ, ಅನುರಾಗ ಬೇರೆ, ಬಿಟ್ಟು ಬಡಲಾರದೇ ಹಿಡಿದುಕೊಳ್ಳುವದಕ್ಕೆ ಪ್ರಪಂಚಕ್ಕೆ ಅನ್ನುತ್ತಾರೆಂದರು. ಅನುರಾಗ ಅಂದರೆ ಪ್ರಪಂಚದ ಭೋಗ ವಸ್ತುಗಳನ್ನು ಬಿಟ್ಟು ಬಿಡಲಾರದೇ ಹಿಡಿಯುವದಕ್ಕೆ ಅನ್ನುತ್ತಾರೆ ಪರಮಾತ್ಮನ ಮೇಲೆ ವ್ಯಾಕುಲತೆ ಪ್ರಪಂಚದ ಮೇಲೆ ಇರಬೇಕು ಅನುರಾಗ ಅಂದರೆ ಬಿಡಲಾರದ ಹಾಗೆ ಹಿಡಿಯುವದು ಪ್ರಪಂಚ ಶಾಮಃ ಅಂದರೆ ನಿಜ ಮನುಷ್ಯ ಮಾನವ ಮೌಲ್ಯಗಳನ್ನು ಅಳವಡಿಸಿಕೊಂಡವ ಶ್ರೇಷ್ಠನಾಗಬೇಕಾಗಿರುವದು ಜಗತ್ತಿನ ಶಾಂತರು, ಜ್ಞಾನಿಗಳು, ಶರಣರು, ಮಹಾತ್ಮರು, ಇವರ ನಡಾವಳಿಕೆಯು ಮಹಾತ್ಮರು ಹೌದೆನ್ನುವಂತೆ ಬಧುಕು ಮಾಡಬೇಕೆಂದರು. ನಡಾವಳಿಕೆಯನ್ನು ಆಚಾರ ವಿಚಾರದಲ್ಲಿ ತರಬೇಕು ಮಾತಿನಲ್ಲಿ ನೋಡುವದರಲ್ಲಿ ನಡೆಯುವದರಲ್ಲಿ ಆಚಾರದಲ್ಲಿದ್ದರೆ ಸಂಪಾದನೆ ಎಂದು ಕರೆಯುತ್ತಾರೆಂದರು. ಬಾಳಿ ಬಧುಕಬೇಕಾಗಿರಬೇಕು ಪರಮಾತ್ಮನ ಮೇಲೆ ಅತ್ಯಮುಲ್ಯವಾದ ವ್ಯಾಕುಲತೆಯನ್ನು ಇಟ್ಟು ಶರಣರು ಬಾಳಿ ಬೆಳಗಿ ಹೋಗಿದ್ದಾರೆಂದರು.
ಪರಮಾತ್ಮ ಎಲ್ಲಿ ಇದ್ದಾನೆ ಅಂದರೆ ಪರಮಾತ್ಮ ನಮ್ಮೋಳಗೆ ಇದ್ದಾನೆ ಅದನ್ನು ಅರೀತು ತಿಳಿದು ನೋಡುವ ಕಣ್ಣು ಬೇಕೆಂದರು. ಶಾಮಃ ಪವಿತ್ರಾತ್ಮರು ನಾನು ನನ್ನದು ಎನ್ನುವದನ್ನು ಬಿಟ್ಟು ಬಂದವರಿಗೆ ಸದ್ಭಕ್ತರಿಗೆ ಕರೆದಿದ್ದಾರೆಂದರು. ಅಲ್ಲಮ ಪ್ರಭುವಿಗೆ ಮಾಯಾದೇವಿ ಶರಣಾಗಿ ಪ್ರಭುದೇವರ ಪಾದದಲ್ಲಿ ಪ್ರಾಣಾರ್ಪಣೆ ಮಾಡಿದ ಈ ತಪ್ಪಿನ ಪ್ರಾಯಶ್ಚಿತವಾಗಿ ಮುಂದೆ ಜನ್ಮ ತಾಳಿ ಬರುತ್ತೇನೆಂದು ಮಾಯಾದೇವಿ ಹೇಳುತ್ತಾಳೆ ಕಲ್ಯಾಣವನ್ನು ಅಲ್ಲಮ ಪ್ರಭುಗಳು ಮುಟ್ಟುವ ಒಳಗಾಗಿ ಶ್ರೇಷ್ಠ ಭಕ್ತರ ಮನೆಯಲ್ಲಿ ಹುಟ್ಟಿ ಈ ಲೋಕ ತಿರಸ್ಕರಿಸಿ ನಿನ್ನನ್ನು ಗುರುವಾಗಿ ಮಾಡಿಕೊಂಡು ಬರುವದಾಗಿ ಮಾಯಾದೇವಿ ಹೇಳಿದ್ದಳಂತೆ ಅಲ್ಲಮ ಪ್ರಭು ಪಾರಮಾತ್ಮ ಪ್ರಪಂಚ ಈ ಎರಡರಲ್ಲಿ ಯುದ್ದದ್ದಲ್ಲಿ ಗೆದ್ದು ನಿರ್ಮೋಹಿ ನಿರಂಕಾರವಾಗಿ ನಿಲ್ಲುವವರಿಗೆ ಸಿದ್ದಯೋಗಿ ಎಂದು ಕರೆಯುತ್ತಾರೆಂದರು. ಅಂತಹ ಸಿದ್ದಯೋಗಿ ಅಲ್ಲಮಪ್ರಭುಗಳು ಆಗಿದ್ದರೆಂದರು. ಅಲ್ಲಮ ಶಿವಯೋಗಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ ತಪಸ್ಸಿನ ದ್ಯಾನದಲ್ಲಿ ಮುಳಗುತ್ತಾನೆಂದರು.
ಬಾಗೇವಾಡಿ ಪ್ರಾಂಥದ ಗುರುಲಿಂಗ ಪ್ರೇಮರು, ಶರಣ ದಂಪತಿಗಳಾದ ಮಾದರಸ ಮಾದಲಾಂಬಿಕೆ ರಾಜ್ಯ ಮನೆತನದ ಮಾದಲಾಂಬಿಕೆ ಧರ್ಮ ರಾಣಿಯಾಗಿದ್ದ ಈ ಸತಿ ಪತಿಗಳ ಭಕ್ತಿ ಬಹಳೇ ಇತ್ತು ಭಕ್ತಿಗಾಗಿ ಗುಡ್ಡ ಬೆಟ್ಟದಲ್ಲಿ ಹೋಗಬೇಕಾಗಿಲ್ಲಾ ಕೋಳಿ ಕೂಗುವ ಮುನ್ನ ಎದ್ದೇಳೆ ಜಗತ್ತನ್ನು ಎಬ್ಬಿಸುವ ಕೋಳಿ ಭಗವಂತನ ನಾಮಸ್ಮರಣೆ ಮಾಡುತ್ತದೆ ಎಂದರು. ಮನುಷ್ಯ ಆಲಸ್ಯ ಆಗಬಾರದೆಂದು 16 ವರ್ಷದಿಂದ ಮಕ್ಕಳಿಲ್ಲದ ಮಾದಲಾಂಬಿಕೆಗೆ ವೃತ ಆಚರಣೆ ಮಾಡಿದರೆ ದೇವನೆ ಬರುತ್ತಾನೆ ನಿನ್ನ ಉದರದಲ್ಲಿ ಎಂದು ಗುರುಗಳು ಹೇಳಿದಂತೆ ಮಾದಲಾಂಬಿಕೆ ನಡೆದುಕೊಳ್ಳುತ್ತಾಳೆ ಶಿವನನ್ನು ನೋಡಿದ ಪೂಜಿಸಿದ ಕಣ್ಣುಗಳು ಪಾಪಂಗ ದೋಷಗಳನ್ನು ಕಳೆದುಕೊಳ್ಳಲು ವೈಧ್ಯರು ಬೇಕಾಗಿಲ್ಲ ಶಂಭುವಿನ ಪಾತ್ರರಾಗಲು ಭಕ್ತಿಯಿಂದ ನಡೆಯಬೇಕೆಂದರು. ಇದು ಸಂಪಾದನೆ ಶೂನ್ಯ ಸಂಪಾದನೆಯನ್ನು ಗಳಿಸಿಕೊಂಡರೆ ಧರ್ಮ ಅನ್ನುವದು ಬೆನ್ನುಹತ್ತದೆ ಎಂದು ಶ್ರೀಗಳು ಹೇಳಿದರು. ಪರಿಜ್ಞಾನವಿಲ್ಲದೇ ಮಾಡುವದಕ್ಕೆ ಕರೆಯುವದಕ್ಕೆ ಅನಾಚಾರವೆಂದು ಕರೆಯುತ್ತಾರೆ ಅನಾಚಾರ ಬಳೆಸದೇ ಭಕ್ತ ಶ್ರೇಷ್ಠರಾಗುವದು ಕಲಿತುಕೊಳ್ಳಬೇಕೆಂದರು. ಮಾದಲಾಂಬಿಕೆಯು ಗುರುವಿನ ಹೇಳಿಕೆಯಂತೆ ನಂದಿಗೆ ಮಂಗಳಾರತಿ ಮಾಡಿ 16 ಸೋಳಾ ಸೋಮವಾರ ವೃತವನ್ನು ಮಾಡುತ್ತಾಳೆ ಪತಿ ಪತ್ನಿ ಭಕ್ತಿಯವರಾದ ಇವರು ವೃತದ ಪ್ರಸಾದ ನಿಷ್ಠೆಯಿಂದ ಮಾಡಿ ವೃತದ ಕೊನೆಯ ದಿನದಂದು 3 ಭಾಗ ಮಾಡಿ ಹಂಚುತ್ತಾರೆ ಅದಾದ ಮೇಲೆ ಭಗವಂತನ ಬೆಳಕು ಅವರ ಮನೆಯಲ್ಲಿ ಬಿಳ್ಳುತ್ತದೆ ಮಾದಲಾಂಬಿಕೆ ಉದರದಲ್ಲಿ ಭಗವಂತನ ಬೆಳಕು ಬಿದಿದ್ದರಿಂದ ಬಸವಣ್ಣನಾಗಿ ಜನ್ಮ ತಾಳಿದ ಜಗಜ್ಯೋತಿಯಾಗಿ ಬೆಳಗಲು ಈ ಲೋಕಕ್ಕೆ ಬಂದ ಬಸವಣ್ಣ ಮುಂದೆ ಸಂಗಮಕ್ಕೆ ಬಂದು ಶಿಷ್ಯತ್ವ ವಹಿಸಿಕೊಂಡು ನನಗೆ ವಿದ್ಯಾರ್ಜನೆ ಕೊಡು ಎಂದು ವಿನಮ್ರ ಭಾವನೆಯಿಂದ ಗುರುವಿಗೆ ಹೇಳಿ ವಿದ್ಯೆ ಕಲಿಯಲು ಮುಂದಾಗುತ್ತಾರೆ ಮುಂದೆ ಗುರಿ ಹಿಂದೆ ಗುರು ಇದ್ದರೆ ಜೀವನ ಸಾರ್ಥಕವಾಗುತ್ತದೆ ಎಂದು ಅರೀತುಕೊಂಡಿದ್ದ ಬಸವಣ್ಣ ಗುರುವಿನಿಂದ ದೀಕ್ಷೆ ಪಡೆದು ಲಿಂಗ ಪೂಜಿಸಿದನಲ್ಲದೇ ಸರ್ವರ ಅಂಗದ ಮೇಲೆ ಲಿಂಗ ಧರಿಸಲು ಅನುಭವ ಮಂಟಪಕ್ಕೆ ಬಂದು ಸೂಚಿಸಿದರಲ್ಲದೇ ಬಿಜ್ಜಳ ರಾಜನ ಭೋಗ ಭಾಗ್ಯದ ಮಂತ್ರಿಯಾಗಿದ್ದ ಬಸವಣ್ಣ ಶೂನ್ಯ ಸಂಪತ್ತಿಗಾಗಿ ಬಂದವ ಇದನ್ನೇ ಗಳಿಸಬೇಕೆಂದು ಬಂದಿದ್ದೇನೆಂದು ಬಸವಣ್ಣ ಹೇಳುತ್ತಿದ್ದನೆಂದು ಶ್ರೀಗಳು ಹೇಳಿದರು.
ಭಾವದಲ್ಲಿ ಗುರುವಿನ ಮೇಲೆ ಭಕ್ತಿ ಇಟ್ಟ ಬಿಕ್ಷುಕಿಯೊಬ್ಬಳು ತನಗೆ ನೀಡಿದ ಬಿಕ್ಷೆಯನ್ನು ಹುಬ್ಬಳ್ಳಿಯ ಸಿದ್ದಾರೂಡರಿಗೆ ಕೊಡಬೇಕೆಂದು ಅಪೇಕ್ಷೀಸಿ ದಿನಗಟ್ಟಲೇ ಸರದಿಯಲ್ಲಿ ನಿಂತ ವೃದ್ದ ಬಿಕ್ಷುಕಿಗೆ ಸಿದ್ದಾರೂಡ ದರ್ಶನಕ್ಕೆ ಯಾರೂ ಬಿಡಲಿಲ್ಲಾ ಇದನ್ನು ಅರೀತ ಸಿದ್ದಾರೂಡರು ಅಲ್ಲಿ ನಿಂತ ವೃದ್ದೆ ಯಾರು? ಆಕೆ ಎದಕ್ಕೆ ಬಂದಿದ್ದಾಳೆ ಎಂದು ಕೇಳಿ ಎಂದು ಹೇಳಿದಾಗ ಭಕ್ತರೊಬ್ಬರು ಬಂದು ಆ ವೃದ್ದೆ ಕೇಳುತ್ತಾರೆ ಆಕೆ ಹೇಳಿದ ಮಾತೇನಂದರೆ ನಾನು ಬಿಕ್ಷೆ ಬೇಡಿದಾಗ ನನಗೆ 1 ರೂ.ಯನ್ನು ಒಬ್ಬ ಶ್ರೀಮಂತ ಕೊಟ್ಟಿದ್ದಾನೆ ಅದನ್ನು ಗುರುವಿಗೆ ಸಿದ್ದಾರೂಡರಿಗೆ ಕೊಡಬೇಕೆಂದು ಸರದಿಯಲ್ಲಿ ನಿಂತಿದ್ದೇನೆ ಆದರೆ ನನಗೆ ಯಾರೂ ಬಿಟ್ಟಿಲ್ಲವೆಂದು ಸಿದ್ದರೂಡರಿಗೆ ಹೇಳಿದಾಗ ಸಿದ್ದಾರೂಡರು ಆಕೆ ಕೊಟ್ಟ 1 ರೂ.ಯನ್ನು ಸ್ವಿಕರಿಸಿ ಇದು 1 ರೂ.ಅಲ್ಲಾ 1 ಕೋಟಿ ರೂ. ನಾನು ಸ್ವಿಕರಿಸಿದ್ದೇನೆಂದು ಹೇಳಿದ ಸಿದ್ದಾರೂಡರು ಮುಂದೆ ಆ ವೃದ್ದೆ ಒಬ್ಬ ಶ್ರೀಮಂತರ ಪುತ್ರಿಯಾಗಿ ಜನ್ಮತಾಳುತ್ತಾಳೆಂದು ಹೇಳಿದ ಶ್ರೀಗಳು ಇತ್ತ ಬಸವಣ್ಣ ಕಲ್ಯಾಣ ನೋಡಲು ಬಂದು ಶೂನ್ಯ ಸಂಪಾದನೆಯನ್ನು ಪಡೆಯಲು ಬಂದು ಅಲ್ಲಿ ಶೂನ್ಯ ಪೀಠವನ್ನು ತಯಾರಿಸಿದ ಅದು ಮಹಾಯೋಗಿಗಾಗಿ ಎಂದು ತಿಳಿದುಬಂದಿತ್ತು ಲಿಂಗದೊಳಗೆ ತಪಸ್ಸಿಗೆ ಕುಳಿತ ಅಲ್ಲಮ ಕಲ್ಯಾಣಕ್ಕೆ ಹೋಗಬೇಕಾಗಿದೆ ಎಂದು ತನ್ನ ಗುರಿ ಮುಟ್ಟಲು ಮುಂದಾಗಿ ಒಬ್ಬ ರೈತನ ಹತ್ತಿರ ಬರುತ್ತಾನೆಂದು ಶ್ರೀಗಳು ಪ್ರವಚನವನ್ನು ಮುಂದುವರೆಸಿದರು.
ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.