ಪರಮಾತ್ಮನ ಅಮೃತವಾಣಿ ಆಲಿಸಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.20 : ಮಂಗಳಕರವಾದ ಚಾತುರ್ಮಾಸ್ಯ ಪರ್ವಕಾಲದ ಪುಣ್ಯಮಾಸಗಳಲ್ಲಿ ಮನೆಯಲ್ಲೇ ಪುರುಷೋತ್ತಮ ರೂಪಿ ಪರಮಾತ್ಮನ ಅಮೃತವಾಣಿ ಆಲಿಸಿ ಅನುಗ್ರಹ ಪಡೆದುಕೊಳ್ಳುವಂತೆ ಪ್ರವಚನಕಾರ ವೇ.ಶ್ರೀಹರಿ ಆಚಾರ್ ಮಾದನೂರು ಹೇಳಿದರು.
ನಗರದ ಶ್ರೀನಿವಾಸ ಆಂಜನೇಯ್ಯ ಶನೈಶ್ಚರ ದೇವಸ್ಥಾನದಲ್ಲಿ ಅಧಿಕಮಾಸ ಜ್ಞಾನಸತ್ರ ಸಮಿತಿ, ತಾಲ್ಲೂಕು ಬ್ರಾಹ್ಮಣ ಸಂಘ, ದೇವಸ್ಥಾನದ ಆಡಳಿತ ಮಂಡಳಿತ ಸಹಯೋಗದಲ್ಲಿ ನಡೆದ ಅಧಿಕ ಮಾಸ ಮಹಾತ್ಮೆ ಹಾಗೂ 12 ಸ್ಕಂದಗಳ ಶ್ರೀಮದ್ ಭಾಗವತ ಪ್ರವಚನದಲ್ಲಿ ಮಾತನಾಡಿದರು.
ಚಂದ್ರಮಾಸದಲ್ಲಿ ಒಂದು ಸಂಕ್ರಮಣವು ಸಂಭವಿಸುವುದಿಲ್ಲವೋ ಅದಕ್ಕೆ ಅಧಿಕ ಮಾಸ ಎನ್ನುವರು. ಶ್ರೀ ಮದ್ಭಾಗವತ ಶ್ರೀಹರಿಯ ಮಹಿಮೆಯ ಚರಿತ್ರೆ ತಿಳಿಸಿದರು.
ಬಲಕುಂದಿ ಹನುಮಂತ ಆಚಾರ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುರಾಜ ಶೆಟ್ಟಿ, ದೇವಸ್ಥಾನದ ಅರ್ಚಕ ವೆಂಕಟಶ್ ಆಚಾರ್, ಶಂಕರ ಮಠದ ಅಧ್ಯಕ್ಷ ಕಿಶೋರ್ ಕುಮಾರ್, ಬ್ರಾಹ್ಮಣ ಸಂಘದ ಗೌರವ ಅಧ್ಯಕ್ಷ ಕೆ.ಎಚ್.ನಾರಾಯಣ ರಾವ್,  ಸದಸ್ಯರಾದ ವೈ.ಪ್ರಹ್ಲಾದ ರಾವ್, ದ್ವಾರಕಬಾಯಿ ಹಾಗೂ ವಿಪ್ರ ಬಾಂಧವರು ಇದ್ದರು.