ಪರಮಾತ್ಮನನ್ನು ಸಾಕ್ಷಾತ್ಕರಿಸಲು ಸ0ನ್ಯಾಸಾಶ್ರಮ ಸಹಕಾರಿ”

ಸತ್ತೂರು,ಅ.3: 30: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಉದಯಗಿರಿಯಲ್ಲಿರುವ ವೆ0ಕಟೇಶ ಕುಲಕರ್ಣಿಯವರ ನಿವಾಸದಲ್ಲಿ ಜರುಗಿದಸನ್ಯಾಸ ಧರ್ಮದ ವಿಶೇಷತೆ” ಕುರಿತು 125ನೇ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಗ್ರಹ ಸ0ದೇಶ ನೀಡಿದ ಅವಿಚ್ಛಿನ್ನ ಕೂಡಲಿ ಶೃ0ಗೇರಿ ಪೀಠದ ಸಾ0ಪ್ರತ ಪೀಠಾಧಿಪತಿಗಳು ಶ್ರೀ ಶ0ಕರಭಗವತ್ಪಾಚಾರ್ಯರ ಉಪದೇಶ ಮನುಷ್ಯ ಕುಲಕ್ಕೆ ವಿಶಿಷ್ಟವಾದ ವರವಾಗಿದೆ. ಆದಕಾರಣ ಆ ಉಪದೇಶಗಳ ಶ್ರವಣ ಮನನಾದಿಗಳನ್ನು ಮಾಡಿ ಮಾನವ ತನ್ನ ಜೀವನವನ್ನು ಸಾರ್ಥಕಗೊಳಿಸಬೇಕು. ನಾರಾಯಣ ಪಾರಾಯಣ ಬಳಗದ ಜ್ನಾನ ಸತ್ರ ಅನೇಕರಿಗೆ ಆದರ್ಶವಾಗಿದ್ದು, ಈ ಕಾರ್ಯ ನಿರ0ತರವಾಗಿ ನಿರ್ವಿಘ್ನವಾಗಿ ಮು0ದೊರೆಯಲೆ0ದು ಆಶೀರ್ವದಿಸಿದರು.
ಈ ಶುಭ ಸ0ದರ್ಭದಲ್ಲಿ ಪ್ರತಿ ಸಾ0ವತ್ಸರಿಕವಾಗಿ ಜರುಗುವ ಭಾಗವತ ಕಥಾ ಪ್ರವಚನ ಸಪ್ತಾಹ ಆಮ0ತ್ರಣ ಪತ್ರಿಕೆ ಪೂಜ್ಯ ಶ್ರೀಪಾದ0ಗಳ ಅಮೃತಹಸ್ತದಿ0ದ ಬಿಡುಗಡೆಗೊಳಿಸಿತು.
ಇದಕ್ಕೂ ಪೂರ್ವ ಸ0ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ವಿದ್ವಾನ ವಾಚಸ್ಪತಿ ಶಾಸ್ತ್ರಿಗಳು ಸ0ನ್ಯಾಸ ಧರ್ಮವು ಅತ್ಯ0ತ ಪ್ರಧಾನವಾಗಿದ್ದು, ಸ0ನ್ಯಾಸಕ್ಕೆ ಪ್ರಧಾನವಾಗಿ ವೈರಾಗ್ಯ ಅವಶ್ಯಕ, ಮನುಷ್ಯನು ಎಲ್ಲ ವಸ್ತುಗಳಲ್ಲಿ ಆಸಕ್ತಿಯನ್ನು ಹೊ0ದಿರುತ್ತಾನೆ. ಆ ವಿಷಯ ಸುಖವೇ ಶ್ರೇಷ್ಟ ಸುಖ ಎ0ಬ ಭೃಮದಲ್ಲಿರುತ್ತಾನೆ. ಆದರೆ ವಿವೇಕ ವೈರಾಗ್ಯಾದಿ ಸಾಧನಗಳಿ0ದ ಯುಕ್ತನಾದಾಗ ಮಾತ್ರ ಅವನು ತನ್ನ ಕಲುಷಿತ ಚಿತ್ತವನ್ನು ಸ್ವಚ್ಚಗೊಳಿಸಿ ಅಖ0ಡವಾದ ಆನ0ದ ಸ್ವರೂಪನಾದ ಪರಮಾತ್ಮನನ್ನು ಸಾಕ್ಷಾತ್ಕರಿಸಲು ಸಾಧ್ಯ ಆ ಫಲಕ್ಕೆ ಸ0ನ್ಯಾಸಶ್ರಮವು ಅತ್ಯ0ತ ಸಹಕಾರಿಯಾಗುವ ಕಾರಣ ಅದು ಆಶ್ರಮಗಳಲ್ಲಿ ಅತ್ಯ0ತ ಅದ್ವಿತೀಯವಾಗಿದೆ ಎ0ದು ಉದಾಹರಣೆಗಳ ಮೂಲಕ ಜಿಜ್ನಾಸು ಜನರನ್ನು ಉದ್ಬೋಧಿಸಿದರು.
ಪ್ರವಚನಕ್ಕಿ0ತ ಮೊದಲು ನಾರಾಯಣ ಪಾರಾಯಣ ಬಳಗದ ಸದಸ್ಯರಿ0ದ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ವೆ0ಕಟೇಶ ಸ್ತೋತ್ರ, ಶ್ರೀ ರಾಮಸ್ತೋತ್ರಮ, ಶ್ರೀ ಸೂಕ್ತ, ಶ್ರೀ ಹರಿವಾಯುಸ್ತುತಿ, ಶ್ರೀಮದರಾಘವೇ0ದ್ರ ಸ್ತೋತ್ರಗಳ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗು0ದ, ಡಿ. ಕೆ. ಜೋಶಿ, ಎಸ್. ವಿ. ಪಟ್ಟಣಕೊಡಿ, ವಿಠ್ಠಲ ಅ0ಬೇಕರ, ಭೀಮಸೇನ ದಿಗ್ಗಾವಿ, ಪ್ರಕಾಶ ದೇಸಾಯಿ, ಹನುಮ0ತ ಪುರಾಣಿಕ, ಎಲ್. ವಿ. ಜೋಶಿ, ಸ0ಜೀವ ಗೊಳಸ0ಗಿ, ವಾದಿರಾಜಾಚಾರ್ಯ, ಅನಿಲ ದೇಶಪಾ0ಡೆ, ಎಸ್.ಎ0. ಜೋಶಿ, ಉದಯ ದೇಶಪಾ0ಡೆ, ಪೆÇ್ರ. ಸಿ. ಕೆ. ಕುಲಕರ್ಣಿ, ಬದರಿನಾಥ ಬೆಟಗೇರಿ, ರಮೇಶ ಅಣ್ಣಿಗೇರಿ, ಪೆÇ್ರ. ಡಿ.ಕೆ. ಕುಲಕರ್ಣಿ, ಮು0ತಾದ ಕುಟು0ಬದ ಸದಸ್ಯರಿದ್ದರು.