ಪರಮಶಿವಯ್ಯ ನಿಧನಕ್ಕೆ ಸಂತಾಪ

ದಾವಣಗೆರೆ,ಏ.8- ನಗರದ ಪಿ.ಜೆ.ಬಡಾವಣೆ ಯಲ್ಲಿರುವ ಶ್ರೀ ವೀರಮಹೇಶ್ವರ ಕ್ರೆಡಿಟ್ ಕೋ-ಆಪ್.ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದ ಪರಮಶಿವಯ್ಯ (87)ನವರು  ನಿಧನರಾಗಿದ್ದು ಅವರಿಗೆ ಸಂತಾಪ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ, ಪರಮಶಿವಯ್ಯನವರು ಸೊಸೈಟಿಯ ಪ್ರಾರಂಭದ ದಿನಗಳಿಂದ ಇಂದಿನವರೆಗೂ ನಮಗೆ ಮಾರ್ಗ ದರ್ಶನ ನೀಡುತ್ತಾ ಬಂದಿದ್ದು ನಮ್ಮ ಸೊಸೈಟಿಯು ಬ್ಯಾಂಕ್ ಆಗಬೇಕೆಂದು ಹಾಗೂ ತಮ್ಮದೇ ಸ್ವಂತ ಕಟ್ಟಡವನ್ನು ಹೊಂದಬೇಕೆAಬ ಮಹದಾಸೆಯನ್ನು ಹೊಂದಿದವರಾಗಿದ್ದರು. ಅವರು ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿ, ನಮಗೆಲ್ಲರಿಗೂ ಮಾದರಿಯಾಗಿದ್ದರು. ನಾವು ಇತ್ತೀಚೆಗೆ ಚುನಾವಣೆಯಲ್ಲಿ ಗೆದ್ದು ಅವರ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದುಕೊಂಡು ಬಂದಿದ್ದೆವು. ಮುಂದೆ ನಮ್ಮ ಸೊಸೈಟಿಯ ಸ್ವಂತ ಕಟ್ಟಡ ನಿರ್ಮಾಣದ ಭೂಮಿ ಪೂಜೆಯಲ್ಲಿ ಅವರು ನಮ್ಮೊಂದಿಗಿದ್ದಿದ್ದರೆ ನಮಗೆಲ್ಲರಿಗೂ ತುಂಬಾ ಸಂತೋಷವಾಗುತ್ತಿತ್ತು ಆದರೆ ಈಗ ಅವರು ನಮ್ಮೊಂದಿಗಿಲ್ಲ ಎಂದು ದುಃಖ ವ್ಯಕ್ತಪಡಿಸಿದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬ ದವರೆಲ್ಲರಿಗೂ ನೀಡಲಿ ಎಂದು ಈ ಸಂದರ್ಭದಲ್ಲಿ ಅವರು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರವಿಯವರು ನಾನು ಸಂಸ್ಥೆಯು ಸ್ಥಾಪನೆಯಾದಾಗಿ ನಿಂದ ಅವರ ಆಡಳಿತ ವೈಖರಿಯನ್ನು ತುಂಬಾ ಹತ್ತಿರದಿಂದ ತಿಳಿದಿದ್ದು, ಅವರ ಪ್ರಾಮಾಣಿಕತೆಯ ನಡವಳಿಕೆ ನಮಗೆಲ್ಲರಿಗೂ ಆದರ್ಶವಾಗಿತ್ತು. ಮುಂದಿನ ತಿಂಗಳಲ್ಲಿ ನಡೆಯಲಿರುವ ನಮ್ಮ ಸೊಸೈಟಿಯ ಸ್ವಂತ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಅವರು ನಮ್ಮ ಜೊತೆಯಿರಬೇಕಿತ್ತು ಎಂದು ದುಃಖವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪಂಚಾಕ್ಷರಯ್ಯ, ನಿರ್ದೇಶಕರುಗಳಾದ ಬಸವರಾಜಯ್ಯ, ವೃಷಭೇಂದ್ರಯ್ಯ, ಎಲ್.ಎಂ.ಆರ್. ಬಸವರಾಜಯ್ಯ, ಶ್ರೀಮತಿರೇಖಾ ಹಾಗೂ ಸಿಬ್ಬಂದಿಗಳಾದ ತನುಜಾ, ಭುವನೇಶ್ವರಿ, ವಿನಯ್ ಹಾಗೂ ಪಿಗ್ಮಿ ಏಜೆಂಟ್ ಸತೀಶ್ ಅವರುಗಳು ಉಪಸ್ಥಿತರಿದ್ದರು.