
ಮಾನ್ವಿ,ಆ.೩೦- ಸರ್ಕಾರದ ಮಹತ್ವ ಪೂರ್ಣವಾದ ಭೂ ಒಡೆತನ ಯೋಜನೆಯ ಪಿ ಟಿ ಸಿ ಎಲ್ ಕಾಯ್ದೆತನ್ನು ಉಲ್ಲಂಘನೆ ಮಾಡಿ ೩೬ ಎಕರೆಯನ್ನು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಂಡಿರುವ ಮಯೂರ ಹಾಗೂ ಅದಕ್ಕೆ ಸಹಕಾರ ಮಾಡಿದ ತಾಲೂಕ ದಂಡಧಿಕಾರಿ ಕಛೇರಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಮುಟೇಷನ್ ರದ್ದತಿ ಮಾಡುವಂತೆ ಆದೇಶವನ್ನು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಇವರ ಕಾರ್ಯ ಶ್ಲಾಘನೀಯ ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಭುರಾಜ ಕೊಡ್ಲಿ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ನಮ್ಮ ಸಂಘಟನೆಯಿಂದ ನಿರಂತರ ಹೋರಾಟದ ಮೂಲಕ ಎಲ್ಲಾ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಒಂದು ತನಿಖೆ ತಂಡವನ್ನು ಬಡ ದಲಿತರಿಗೆ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗಿದ್ದ ಜಮೀನು ಪರಭಾರೆ ಮಾಡುವಂತಿಲ್ಲ ಹಾಗೂ ಬೇರೊಬ್ಬರು ಖರೀದಿಸುವಂತಿಲ್ಲ ಎಂದು ಪಿ ಟಿ ಸಿ ಎಸ್ ಕಾಯ್ದೆಯಲ್ಲಿದ್ದರೂ ಕೂಡ ಕಾನೂನು ನಿಯಮ ಉಲ್ಲಂಘನೆಯಾಗಿದ್ದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾನೂನು ಉಲ್ಲಂಘಿಸಿರುವ ವ್ಯಕ್ತಿ ಹಾಗೂ ತಾಲೂಕ ದಂಡಧಿಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುಬೇಕು ಮತ್ತು ಮುಟೇಷನ್ ರದ್ದು ಮಾಡಿ ಫಲಾನುಭವಿಗಳಿಗೆ ನೀಡುವಂತೆ ಆದೇಶ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಎಸ್ ಎಂ ಶಹನವಾಜ್, ಟಿಪ್ಪು, ಶಾಹಿದ್ ಸಿದ್ದಿಕಿ, ರಾಮಣ್ಣ ಸಂಗಪೂರು, ಜಯರಾಜ ಕೊಡ್ಲಿ,ಇದ್ದರು.