
ಕೋಲಾರ,ಮೇ.೬:ವಿಧಾನಸಭಾ ಕ್ಷೇತ್ರದಲ್ಲಿ ಇವತ್ತು ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಹೊರಗಿನ ವ್ಯಕ್ತಿಗಳು ಬಂದು ಅಳ್ವಿಕೆ ಮಾಡಲು ಬಂದಿದ್ದಾರೆ ಕೈಮುಗಿದು ಕೇಳಿಕೊಳ್ಳುತ್ತೇನೆ ಪರಕೀಯರಿಗೆ ಈ ಕ್ಷೇತ್ರವನ್ನು ಅಳ್ವಿಕೆ ಮಾಡಲು ಅವಕಾಶ ಕೊಡಬೇಡಿ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ತಾಲೂಕಿನ ಮಾರ್ಜೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಮಧೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನಿಂದಲೂ ಸ್ವಾಭಿಮಾನದ ಕ್ಷೇತ್ರವಾಗಿದ್ದ ಕೋಲಾರವನ್ನು ನಾವುಗಳೇ ಮಾಡಿದ ಸ್ವಯಂಕೃತ ಅಪರಾಧದಿಂದಾಗಿ ಹೊರಗಿನ ವ್ಯಕ್ತಿಗಳು ಬಂಡವಾಳ ಹಾಕಿ ರಾಜಕಾರಣ ಮಾಡಲು ಬಂದಿದ್ದಾರೆ ಇವತ್ತು ಯೋಚನೆ ಮಾಡುವ ಸಂದರ್ಭ ಬಂದಿದೆ ದಯವಿಟ್ಟು ಹೊರಗಿನ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ ಎಂದರು.
ಜೆಡಿಎಸ್ ಮುಖಂಡ ಡಾ ರಾಜೇಂದ್ರ ಪ್ರಸಾದ್ ಮಾತನಾಡಿ ಇವತ್ತು ಒಂದು ದಿನ ಯೋಚನೆ ಮಾಡಿ ಮತ ಹಾಕಿದರೆ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತದೆ ಇವತ್ತು ನಮ್ಮ ಮುಂದೆ ಸ್ವಾಭಿಮಾನ ಕೋಲಾರ ಕಟ್ಟುವ ಕನಸನ್ನು ಕಾಣುವ ಸಿಎಂಆರ್ ಶ್ರೀನಾಥ್ ನಮ್ಮ ಆಯ್ಕೆಯಾಗಬೇಕು ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಈಗಾಗಲೇ ಅವಕಾಶ ನೀಡಲಾಗಿದೆ ಒಂದು ಬಾರಿ ಸಿಎಂಆರ್ ಶ್ರೀನಾಥ್ ಅವರಿಗೆ ಕೊಟ್ಟ ನೋಡಿ ರಾಜ್ಯದ ಮಾದರಿ ಕ್ಷೇತ್ರವಾಗಿ ಮಾಡಲಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ಮುಖಂಡರಾದ ಜೆಟ್ ಅಶೋಕ್, ಎಪಿಎಂಸಿ ಪುಟ್ಟುರಾಜು, ದಲಿತ ನಾರಾಯಣಸ್ವಾಮಿ, ಮತ್ತಿಕುಂಟೆ ಕೃಷ್ಣ, ಸಂತೋಷ್, ಚಂಬೆ ರಾಜೇಶ್, ಮುನೇಗೌಡ, ಮೈಲಾರಪ್ಪ, ಅರುಣ್ ಗೌಡ, ರಾಮಕೃಷ್ಣೇಗೌಡ ಮುಂತಾದವರು ಇದ್ದರು