ಯುವ ಪ್ರತಿಭೆ ಸಂತೋಷ್ ಕೈದಾಳ ಆಕ್ಷನ್ ಕಟ್ ಹೇಳಿರುವ ತಂದೆ-ಮಗನ ಭಾವನಾತ್ಮ ಸಂಬಂದ ಹೊಂದಿರುವ ಕಥೆಗೆ ವೀರಗಾಸೆ ವಿಷಯವನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ನೆನಪಿರಲಿ ಪ್ರೇಮ್ ಲಿರಿಕಲ್ ಹಾಡು ಚಿತ್ರಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಸಂತೋಷ್ ಕೈದಾಳ ಮಾತನಾಡಿ ತಂದೆ ಮಗನ ಭಾವನಾತ್ಮಕ ಸಂಬಂಧದ ಕಥೆ ಹೊಂದಿರುವ ಚಿತ್ರದಲ್ಲಿ ವೀರಗಾಸೆಯ ಕಥೆಯನ್ನು ಚಿತ್ರದಲ್ಲಿ ಬಿಂಬಿಸುವ ಕೆಲಸ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ರಾಜಹಂಸ ಚಿತ್ರದಲ್ಲಿ ಕ್ರೌಡ್ ಫಂಡಿಂಗ್ ನೋಡಿ ಅದರಿಂದ ಸ್ಪೂರ್ತಿಯಾಗಿ ನಾವು ಈ ಚಿತ್ರಕ್ಕೆ ಕ್ರೌಡ್ ಫಂಡಿಂಗ್ ಮಾಡಿದ್ದೇವೆ. ನಾಯಕ ಪ್ರೇಮ್, ನಾಯಕಿ ಮೈತ್ರಿ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ಚಿತ್ರವನ್ನು ಮಲ್ಟಿಪ್ಲೆಕ್ಸ್ ಚಿತ್ರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ. ಅಂಗವಿಕಲ .ತಂದೆ ಮಗನನ್ನು ವೀರಗಾಸೆ ಕಲಾವಿದನ್ನಾಗಿ ಮಾಡುವ ಕನಸು ಕಂಡವರು ಕನಸು ಕಟ್ಟಿಕೊಂಡವರು ಮುಂದೆ ಮಗನ ಅದರಲ್ಲಿ ಯಶಸ್ವಿ ಆಗುತ್ತಾ ಅಥವಾ ಇಲ್ಲವ ಎನ್ನುವುದು ಚಿತ್ರದ ತಿರುಳು ಎಂದು ಮಾಹಿತಿ ಹಂಚಿಕೊಂಡರು.
ನಟ ಪ್ರೇಮ್ ಸೈಡೆಗಲ್ ಮಾತನಾಡಿ 2010 ರಿಂದ ರಂಗಭೂಮಿಯ ಒಡನಾಟ ಹೊಂದಿದ್ದೇನೆ. ಚಿತ್ರೀಕರಣ ಪೂರ್ಣಗೊಂಡಿದ್ದು ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ 200 ಮಂದಿ ಸೇರಿಕೊಂಡು ಬಂಡವಾಳ ಹಾಕಿದ್ದಾರೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರ ಬೆಂಬಲವಿರಲಿ.ಜುಲೈ 14 ಅಥವಾ 21ಕ್ಕೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. 200 ಮಂದಿ ನಮ್ಮ ಮೇಲೆ ನಂಬಿಕೆ ಇಟ್ಟು ಮತ್ತೆ ಸಿನಿಮಾಗೆ ಬಂಡವಾಳ ಹಾಕಲು ಮುಂದಾಗಿದ್ದಾರೆ.
ಸಾಣೆ ಹಳ್ಳಿಯಲ್ಲಿ ಡಿಪ್ಲೊಮೋ ಮಾಡಿದಾಗ ವೀರಗಾಸೆ ಸೇರಿದಂತೆ ಹಲವು ಕಲೆಗಳನ್ನು ಹೇಳಿಕೊಡುತ್ತಾರೆ.ಅಲ್ಲಿ ವೀರಗಾಸೆ ಕಲಿತಿದ್ದೆ ಎಂದು ಮಾಹಿತಿ ಹಂಚಿಕೊಂಡರು
ನಾಯಕಿ ಮೈತ್ರಿ, ಚಿತ್ರೀಕಣದ ಸಮಯದಲ್ಲಿ ಮೂಡಿ ಬಂದ ಕ್ಷಣಗಳು ಕಣ್ಣ ಮುಂದೆ ಬಂದವು. ನಟ ಪ್ರೇಮ್ ಜೊತೆ ಇಂದಿಗೂ ಜಗಳ ಆಡುತ್ತೇವೆ. ಅದೇ ಬಾಂಡ್ ಕೂಡ ಚಿತ್ರದಲ್ಲಿ ಕೆಲಸ ಮಾಡಿದೆ. ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದರು. ನಿರ್ದೇಶಕ ಜಡೇಶ್ ಹಂಪಿ ಚಿತ್ರಕ್ಕೆ ಶುಭ ಹಾರೈಸಿದರು. ಸಂಗೀತ ನಿರ್ದೇಶಕರಾದ ಅಪರಜಿತ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.