ಪರಂಪರೆ, ಸಂಸ್ಕೃತಿ ಮರೆಯಬಾರದು: ಶಾಂತಲಿಂಗ ಶ್ರೀ


ಲಕ್ಷ್ಮೇಶ್ವರ, ನ29: ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವದಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತಿದ್ದು ಪರಂಪರೆ ಸಂಸ್ಕೃತಿ ಇತಿಹಾಸಗಳನ್ನು ಎಂದಿಗೂ ಮರೆಯಬಾರದು ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ ವಿಶ್ರಾಂತ ಶಿಕ್ಷಕ ದಂಪತಿಗಳಾದ ಪೂರ್ಣಾಜಿ ಖರಾಟೆ ಮತ್ತು ವಿಜಯಲಕ್ಷ್ಮಿ ಖರಾಟೆ ದಂಪತಿಗಳ ಸಮಾರಂಭದ ಸಾನಿಧ್ಯವಹಿಸಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಆಶೀರ್ವಚನ ನೀಡಿದ ಅವರು ಸಮಾಜ ಪರ ಚಿಂತನೆಗಳು ಆಚಾರ-ವಿಚಾರಗಳು ದೇಶದ ಸಂಸ್ಕೃತಿ ಪರಂಪರೆ ನಾಡಿನ ಸಂಸ್ಕೃತಿ ಪರಂಪರೆಗಳನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶುಭಾಶಯ ನುಡಿ ನೀಡಿದ ಜಾನಪದ ವಿದ್ವಾಂಸ ಶಂಭು ಬಳಿಗಾರ್ ಅವರು, ಪುಲಿಗೇರಿ ನಾಡು ತನ್ನದೇ ಆದ ಭವ್ಯವಾದ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು, ಸಂಸ್ಕಾರವನ್ನು ಹೊಂದಿದೆ ಎಂದರು.
ಪೂರ್ಣ ವಿಜಯ ಅಭಿನಂದನಾ ಗ್ರಂಥವನ್ನು ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ ಬಿಡುಗಡೆ ಮಾಡಿ ಮಾತನಾಡಿದರು.
ಶಾಸಕ ರಾಮಣ್ಣ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ವಹಿಸಿದ್ದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್, ಉಪಾಧ್ಯಕ್ಷ ರಾಮಣ್ಣ ಗಡದವರ್, ಚಂಬಣ್ಣ ಬಾಳಿಕಾಯಿ, ಲಕ್ಷ್ಮಿಕಾಂತ್ ಹೊಟಗಿಕರ, ಸುಲೇಮಾನ್ ಕಣಕೆ, ಬಸವೇಶ್ ಮಹಾಂತಶೆಟ್ಟರ್, ಜಯಕ್ಕ ಕಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಇದ್ದರು.
ಕಾರ್ಯಕ್ರಮದಲ್ಲಿ ಸೋಮಣ್ಣ ಮುಳಗುಂದ, ವಿ ಜಿ ಪಡಿಗೇರಿ, ಡಿ ಬಿ ಬಳಿಗಾರ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಆದಮ್ ಸಾಬ್ ಬಂಕಾಪುರ, ನೀಲಪ್ಪ ಕರಜಕ್ಕಣ್ಣವರ, ಎಸ್ಪಿ ಪಾಟೀಲ್, ಸಿ ವಿ ಕೆರಿಮನಿ, ಕುಬೇರಪ್ಪ ಮಹಾಂತಶೆಟ್ಟರ್, ಬಿ ಎಸ್ ಹರ್ಲಾಪುರ, ಸುಭಾಸ್ ಬಟಗುರ್ಕಿ, ಡಿ ಎಚ್ ಪಾಟೀಲ್, ಗಂಗಾಧರ್ ಮೆಣಸಿನಕಾಯಿ, ದುಂಡೇಶ ಕೊಟಗಿ, ಸೇರಿದಂತೆ ಖರಾಟೆ ಅಭಿಮಾನಿಗಳು, ಶಿಷ್ಯವೃಂದ, ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು.
ಎಸ್ ಬಿ ಉಪ್ಪಿನ, ಈಶ್ವರ್ ಮೆಡ್ಲೇರಿ, ಜೆ ಎಸ್ ರಾಮ ಶೆಟ್ಟರ್, ಬಸವರಾಜ್ ಬಾಳೇಶ್ವರ, ಜಯಶ್ರೀ ಹೊಸಮನಿ ನಿರ್ವಹಿಸಿದರು.