ಪರಂಪರೆ ಸಂಗ್ರಹಿಸುವ ಹವ್ಯಾಸ ರೂಢಿಸಿಕೊಳ್ಳಲು ಉಪ್ಪಿನ್ ಕರೆ

ಕಲಬುರಗಿ:ಮೇ.18:ಪರಂಪರೆಯನ್ನು ಸಂಗ್ರಹಿಸಿ ಮನೆಯಲ್ಲಿ ಪ್ರದರ್ಶಿಸುವ ಹವ್ಯಾಸ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಖ್ಯಾತ ಕಲಾವಿದ ಬಸವರಾಜ್ ಆರ್. ಉಪ್ಪಿನ್ ಅವರು ಹೇಳಿದರು.
ಇಂಡಿಯನ್ ರಾಯಲ್ ಅಕ್ಯಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಹಾಗೂ ಅಹ್ಸಾನ್ ಕ್ಯಾಲಿಯರ್ಟ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಆಹ್ಸಾನ್ ಡಿಸೈನ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಪ್ರಯುಕ್ತದ ಒಂದು ದಿನದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆಯನ್ನು ಸಂಗ್ರಹಿಸಿದರೆ ನಮ್ಮ ಹಿಂದಿನ ಸಂಸ್ಕøತಿ, ಪರಂಪರೆ ಮುಂತಾದ ವೈವಿಧ್ಯತೆಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯವಾಗುತ್ತದೆ. ನಿಮ್ಮ ಅಜ್ಜಿಯರು ಬಳಸಿದ ಅವಶೇಷಗಳನ್ನು ರಕ್ಷಿಸಲು ಪ್ರಯತ್ನಿಸಿ ಎಂದರು.
ಖ್ಯಾತ ಛಾಯಾಗ್ರಾಹಕ ಮತ್ತು ಸಂಶೋಧಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ಶಿಕ್ಷಣ ಮತ್ತು ಸಂಶೋಧನೆಗೆ ವಸ್ತುಸಂಗ್ರಹಾಲಯದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಲಾವಿದರಾದ ರಾಜಶೇಖರ್ ಶಾಮಣ್ಣ, ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ಸುಬ್ಬಯ್ಯ ನೀಲಾ, ಸೈಯದ್ ಮುಸ್ತಫಾ, ಸೂರ್ಯಕಾಂತ್ ನಂದೂರ್, ರಾಮಗಿರಿ ಪೆÇಲೀಸ್ ಪಾಟೀಲ್, ಶೇಖ್ ಅಹಸನ್, ರಜನಿ ತಳವಾರ್ ಹಾಗೂ ಬೀದರ್‍ನ ವಿಠಲ್ ಜಾಧವ್, ರಾಜಣ್ಣ ಮುಗಳಿ, ಜಾವೀದ್ ಅಹಮದ್, ಕಾಕಶನ್ ನಜ್ನೆ ಮುಂತಾದವರು ಒಂದು ದಿನದ ಚಿತ್ರಕಲಾ ಶಿಬಿರದಲ್ಲಿ ಹಲವಾರು ಸ್ಮಾರಕಗಳನ್ನು ಬಳಸಿಕೊಂಡು ಎಲ್ಲ ಕಲಾವಿದರು ತಮ್ಮ ಪರಿಕಲ್ಪನೆಗಳನ್ನು ಕ್ಯಾನ್ವಾಸ್‍ನಲ್ಲಿ ಚಿತ್ರಿಸಿದರು.