ಪರಂಪರಾಗ ಕೃಷಿ ಯೋಜನೆ:ಅನುಷ್ಠಾನ ಸಭೆ

ರಾಯಚೂರು.ಡಿ.೨೩. ಸಾವಯವ ಕೃಷಿಗೆ ಸಂಬಂಧಿಸಿದಂತೆ ರೈತರಿಗಾಗಿ ಸರ್ಕಾರವು ಪರಂಪರಾಗ ಕೃಷಿ ಯೋಜನೆಯನ್ನು ಜಾರಿಗೆ ತಂದಿದ್ದು ಇದನ್ನು ಎಲ್ಲ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ ಅವರು ಹೇಳಿದರು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪರಂಪರಾಗ ಕೃಷಿ ಯೋಜನೆ ಅನುಷ್ಠಾನಕ್ಕಾಗಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜಿಲ್ಲೆಯು ದೊಹಾಬ್ ಪ್ರದೇಶವಾಗಿದ್ದು ನಮ್ಮ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುತ್ತಾರೆ, ಅದರಿಂದ ರೈತರಿಗೆ ಸಾವಯವ ಕೃಷಿಗೆ ಸಂಬಂಧಿಸಿದಂತೆ ಪರಂಪರಾಗ ಕೃಷಿ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ನೈಸರ್ಗಿಕ ಸಂಪನ್ಮೂಲ ಆದಾರಿತ ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸುವುದು,ಕೃಷಿ ಉತ್ಪಾದನೆಯಲ್ಲಿ ಸಾಂಪ್ರದಾಯಿಕ ವಿಧಾನಗಳನ್ನ ಅಳವಡಿಸಿ ಸಾವಯವ ತ್ಯಾಜ್ಯಗಳ ಮರುಬಳಕೆ ಮಾಡಿ ಬಾಹ್ಯಮೂಲಗಳ ಪರಿಕರಗಳ ಅವಲಂಬನೆ ಕಡಿಮೆ ಮಾಡುವುದರ ಮೂಲಕ ಬೇಸಾಯ ವೆಚ್ಚ ಕಡಿಮೆಗೊಳಿಸಿ ಕೃಷಿಕರ ಆದಾಯ ವೃದ್ಧಿಸುವುದು,ಗುಂಪು ಮತ್ತು ಗುಚ್ಚ ಮಾದರಿಯಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸ್ವಸಹಾಯ ಸಾವಯವ ಗುಂಪುಗಳನ್ನು ಅಭಿವೃದ್ಧಿಗೊಳಿಸಿ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ದೃಡೀಕರಣ ನಿರ್ವಹಣೆಗೆ ಸಜ್ಜುಗೊಳಿಸುವುದರ ಮೂಲಕ ರೈತರನನ್ನು ಸಬಲಿಕರಣಗೊಳಿಸುವುದು ಅಪಾಯಕಾರಿ ರಾಸಾಯನಿಕಗಳನ್ನು ಬಳಸದೆ ಆಹಾರ ಉತ್ಪಾದನೆ ಮಾಡಿ ರೈತರನ್ನು ಸ್ಥಳಿಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾರುಕಟ್ಟೆಗಳಿಗೆ ನೇರ ಸಂಪರ್ಕ ಕಲ್ಪಿಸಿ ರೈತರಲ್ಲಿ ಉದ್ಯಮ ಶೀಲತೆ ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಅದರಿಂದ ರೈತರಿಗೆ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಮ್ಮದ್ ಅಲಿ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.