ಪರಂಪರಾಗತ ಆಹಾರ ಪದ್ದತಿ ಕುರಿತು ಆಹಾರ ಪ್ರದರ್ಶನ

ಬಳ್ಳಾರಿ ಏ 01 : ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಭಾಗವಾಗಿ ಪೌಷ್ಟಿಕ ಆಹಾರ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಪರಂಪರಾಗತ ಆಹಾರ ಪದ್ದತಿ ಕುರಿತು ಆಹಾರ ಪ್ರದರ್ಶನ, ಚಿತ್ರಕಲೆ ಮತ್ತು ಕಥೆ ಹೇಳುವ ಸ್ಪರ್ಧೆಯನ್ನು ನಗರದ ಶಿಶು ಅಭಿವೃದ್ಧಿ ಯೋಜನೆಯ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ್ ಇದಕ್ಕೆ ಚಾಲನೆ ನೀಡಿ. ಪೋಷಣ್ ಅಭಿಯಾನ ಯೋಜನೆಯ ಗುರಿ ಉದ್ದೇಶಗಳನ್ನು ಜನರಿಗೆ ತಲುಪವಂತೆ ಮಾಡುವ ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ಆಯೋಜಿಸಿ. ಗ್ರಾಮ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಎಲ್ಲರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
್ಲ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಎಲ್ಲಾ ವಲಯಗಳ ಅಂಗನವಾಡಿ ಕಾರ್ಯಕತೆರ್ಯರು ಮತ್ತು ಸಹಾಯಕಿಯರು ಸ್ಥಳಿಯವಾಗಿ ದೊರೆಯುವಂತಹ ಪೌಷ್ಟಿಕಾಂಶಗಳು ಹಾಳಾಗದಂತೆ ರುಚಿಯಾದ, ಶುಚಿಯಾದ ಪರಂಪರಾಗತ ಆಹಾರಗಳನ್ನು ತಯಾರಿಸಿದ್ದು, ಸಾರ್ವಜನಿಕರಿಗೆ ಪ್ರದರ್ಶನ ಮಾಡಿ ತೋರಿಸುವುದರ ಜೊತೆಗೆ ಅವುಗಳನ್ನು ಹೇಗೆ ತಯಾರಿಸಲಾಯಿತು ಎನ್ನುವುದರ ಕುರಿತು ಪ್ರಾತ್ಯಕ್ಷಿಕತೆಯನ್ನು ಮಾಡಿ ತೋರಿಸಲಾಯಿತು. ಅನಂತರ ಪೌಷ್ಟಿಕ ಆಹಾರ ಕುರಿತು ಚಿತ್ರಕಲೆ ಸ್ಪರ್ಧೆ ಹಾಗೂ ಕಥೆ ಹೇಳುವಂತಹ ಭೌದ್ಧಿಕ ಚಟುವಟಿಕೆಯುಳ್ಳ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.