ಪಯಣದ ಹಾದಿಯ ಮಿಸ್ಟ್ರಿ ,ಥ್ರಿಲ್ಲರ್

ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ.ಆ ಸಾಲಿಗೆ ಹೊಸ ಭರವಸೆ ಹೊತ್ತು ಬಂದಿದೆ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾತಂಡ.
‘ಹಾಗಂತ ಡ್ರಗ್ಸ್, ಗಾಂಜಾ ಹಾವಳಿಯ ಸುತ್ತ ಈ ಸಿನಿಮಾ ಅಲ್ಲ.ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿದೆ.
ನಿರ್ದೇಶಕ ಜಂಟಿ‌ ಹೂಗಾರ್, ಟೈಟಲ್​ನಲ್ಲಿ ಒಂದು ಗಟ್ಟಿತನ ಬೇಕಿತ್ತು. ಕಥೆಯ ಶೈಲಿಯೂ ಬೇರೆಯದ್ದಾಗಿರುವುದರಿಂದ ಅದಕ್ಕೆ ಒಪ್ಪುವ ಶೀರ್ಷಿಕೆಯ ಹುಡುಕಾಟದಲ್ಲಿದ್ದಾಗ, ಗುಡುಗುಡಿಯಾ ಸೇದಿ ನೋಡೋ ತುಂಬ ಹತ್ತಿರ ಎನಿಸಿತು. ಹಾಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಸದ್ಯ‘ಚಿತ್ರದ ಶೇ. 90 ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಪಯಣದ ಹಾದಿಯಲ್ಲಿ ಮಿಸ್ಟರಿ ಥ್ರಿಲ್ಲರ್​ ಶೈಲಿಯ ಕಥೆ ತೆರೆದುಕೊಳ್ಳುತ್ತದೆ. ಪ್ಯಾಚ್​ವರ್ಕ್​ ನಡೆಯುತ್ತಿದ್ದು, ಡಿಸೆಂಬರ್​ ವೇಳೆಗೆ ಚಿತ್ರಮಂದಿರಕ್ಕೆ ಬರುತ್ತೇವೆ. ಬುಡಕಟ್ಟು ಸಮುದಾಯ, 600, 700 ವರ್ಷಗಳ ಹಿಂದಿನ ಒಂದಷ್ಟು ನಾಗರಿಕತೆ ಮತ್ತು ಕನ್ನಡದ ಕಂಪೂ ಈ ಚಿತ್ರದಲ್ಲಿ ಕಾಣಿಸಲಿದೆ ಎನ್ನುವ ವಿವರಣೆ ಅವರದು.
ಬೆಂಗಳೂರು ಸೇರಿ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಹಳಗನ್ನಡದ ಬಳಕೆ ಇರುವುದರಿಂದ ಕನ್ನಡ ಚಿತ್ರದಲ್ಲಿ ಕನ್ನಡದ ಸಬ್​ಟೈಟಲ್​ ಅನ್ನು ನೀವೆಲ್ಲ ನೋಡಲಿದ್ದೀರಿ’ ಎಂದರು.
ನಿರ್ಮಾಪಕ ಕೃಷ್ಣಕಾಂತ್ ಎನ್, ಜನಪದದ ಸೊಗಡಿನ ಕಥೆಯನ್ನು ಮತ್ತಷ್ಟು ಮೊನಚಾಗಿಸಿ ಕಳೆದ ಎರಡು ವರ್ಷದ ಹಿಂದೆಯೇ ಆರಂಭಿಸಿ ಬಿಡುಗಡೆಗೆ ತಂದಿದ್ದೇವೆ’ ಎಂದರು.
ಸುಜಿತ್​ ಪೂರ್ಣ, ಐಶ್ವರ್ಯಾ ದಿನೇಶ್​, ರಶ್ಮಿತಾ ಗೌಡ, ನಿರಂಜನ್​ ನಟಿಸಿದ್ದಾರೆ‌
ಹೊಸಬರ ತಂಡಕ್ಕೆ ನಿರ್ಮಾಪಕ ನವರಸನ್​ ಅತಿಥಿಯಾಗಿ ಆಗಮಿಸಿ, ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ದೀಪಿಕ್​ ಯರಗೇರಾ ಛಾಯಾಗ್ರಾಹಣ, ಉದಿತ್​ ಹರಿದಾಸ್​ ನೀಡಿದ್ದಾರೆ.