ಪನ್ನೀರುದಾನಿ, ಅತ್ತರುದಾನಿ

ಕಲಬುರಗಿ,ಜು 11: ಮದುವೆ, ಉಪನಯನ, ದೇವತಾಕಾರ್ಯ ಮೊದಲಾದ ಶುಭಸಂದರ್ಭದಲ್ಲಿ sಸುಗಂಧ ದ್ರವ್ಯ ತೈಲಗಳನ್ನು ಬಳಸಲು ಪನ್ನೀರುದಾನಿ ಮತ್ತು ಅತ್ತರುದಾನಿ ಎಂಬ ಬೆಳ್ಳಿಯಿಂದ ತಯಾರಿಸಿದ ಅಲಂಕಾರಿಕ ಸಾಧನಗಳನ್ನು ಉಪಯೋಗಿಸುತ್ತಿದ್ದರು.
ಪನ್ನೀರುದಾನಿಯಲ್ಲಿ ಗುಲಾಬಿನೀರನ್ನು ತುಂಬಿ ಬಂದ ಅತಿಥಿಗಳಿಗೆ ಪ್ರೋಕ್ಷಿಸಲಾಗುತ್ತಿತ್ತು. ಅತ್ತರುದಾನಿಯಲ್ಲಿ ತುಂಬಿದ ಸುಗಂಧದ್ರವ್ಯವನ್ನು , ಸಾಧನಕ್ಕೆ ನಾಜೂಕು ಸರಪಳಿಯಿಂದ ಅಳವಡಿಸಿದ ಬೆಳ್ಳಿಕಡ್ಡಿಯ ಮೂಲಕ ಮುಂಗೈಗೆ ಹಚ್ಚುತ್ತಿದ್ದರು.ಇವುಗಳನ್ನು ಬಳಸುವ ಪದ್ಧತಿ ಈಗ ಕ್ರಮೇಣ ಕಡಿಮೆಯಾಗುತ್ತಿದ್ದರೂ, ಅಲ್ಲಲ್ಲಿ ಈ ಸಾಧನಗಳನ್ನು ಬಳಸುವದು ಕಂಡುಬರುತ್ತದೆ.( ಚಿತ್ರ ಲೇಖಕರಿಂದ)
ವಿಜಯೇಂದ್ರ.ಕುಲಕರ್ಣಿ.