ಪನೀರ್ ಮಖ್ನಿ

ಬೇಕಾಗುವ ಸಾಮಗ್ರಗಳು

*ಪನೀರ್ – ೧೫೦ ಗ್ರಾಂ
*ತುಪ್ಪ – ೧ ಚಮಚ
*ಚಕ್ಕೆ – ೩
*ಲವಂಗ – ೫
*ಏಲಕ್ಕಿ – ೨
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಟೊಮೆಟೊ – ೧
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಜೀರಿಗೆ ಪುಡಿ – ೧/೨ ಚಮಚ
*ಗರಂ ಮಸಾಲ – ೧ ಚಮಚ
*ಉಪ್ಪು – ೧ ಚಮಚ
*ಗೋಡಂಬಿ ಪೇಸ್ಟ್ – ೨ ಚಮಚ
*ಬೆಣ್ಣೆ – ೧ ಚಮಚ
*ಕಸೂರಿ ಮೇಥಿ – ೧/೨ ಚಮಚ
*ಜೇನುತುಪ್ಪ – ೧ ಚಮಚ
*ಫ್ರೆಷ್ ಕ್ರೀಮ್ – ೨ ಚಮಚ

ಮಾಡುವ ವಿಧಾನ :

ಬಾಣಲಿಗೆ ತುಪ್ಪ ಹಾಕಿ. ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಹಾಕಿ ಘಮ ಬರುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿ ರುಬ್ಬಿದ ಟೊಮೆಟೊ ಪೇಸ್ಟ್, ಅಚ್ಚಖಾರದ ಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಗೋಡಂಬಿ ಪೇಸ್ಟ್, ಬೆಣ್ಣೆ, ಕಸೂರಿ ಮೇಥಿ, ಚಿಕ್ಕದಾಗಿ ಕತ್ತರಿಸಿದ ಪನೀರ್, ಜೇನುತುಪ್ಪ ಹಾಕಿ ಬೇಯಿಸಿ. ಕೊನೆಯಲ್ಲಿ ಮೇಲೆ ಫ್ರೆಷ್ ಕ್ರೀಮ್ ಹಾಕಿದರೆ ರುಚಿಯಾದ ಪನೀರ್ ಮಖ್ನಿ ರೆಡಿ.