ಪನೀರ್ ಪೆಪ್ಪರ್ ಮಸಾಲಾ

ಬೇಕಾಗುವ ಸಾಮಗ್ರಿಗಳು
*ಪನೀರ್ – ೨೫೦ ಗ್ರಾಂ
*ಪಾಲಕ್ – ೧ ಕಟ್ಟು
*ಗೋಡಂಬಿ ಪೇಸ್ಟ್ – ೫೦ ಗ್ರಾಂ
*ಟೊಮೆಟೊ ಪ್ಯೂರಿ – ೨ ಚಮಚ
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಎಣ್ಣೆ – ೧೦೦ ಮಿ. ಲೀ
*ಈರುಳ್ಳಿ – ೨
*ಅರಿಶಿಣ -೧/೨ ಚಮಚ
*ಹಸಿರು ಮೆಣಸಿನಕಾಯಿ – ೪
*ಧನಿಯಾ ಪುಡಿ – ೧ ಚಮಚ
*ಉಪ್ಪು – ೧ ಚಮಚ
*ಜೀರಿಗೆ ಪುಡಿ – ೧ ಚಮಚ
*ಅಚ್ಚ ಖಾರದ ಪುಡಿ – ೧ ಚಮಚ
*ಗರಂ ಮಸಾಲಾ – ೧ ಚಮಚ
*ಕಾಳು ಮೆಣಸಿನ ಪುಡಿ – ೧ ಚಮಚ
*ಫ್ರೆಷ್ ಕ್ರೀಮ್ – ೧ ಚಮಚ

ಮಾಡುವ ವಿಧಾನ :

ಕಡಾಯಿಗೆ ೨ ಚಮಚ ಎಣ್ಣೆ ಹಾಕಿ ಕಾಯಿಸಿ. ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಶುಂಠಿ ಬೆಳುಳ್ಳಿ ಪೇಸ್ಟ್, ಚಿಕ್ಕದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ, ಟೊಮೆಟೊ, ಜೀರಿಗೆ ಪುಡಿ, ಧನಿಯಾ ಪುಡಿ, ಅರಿಶಿಣ ಹಾಕಿ ಚೆನ್ನಾಗಿ ಕಲಸಿ. ಈಗ ರುಬ್ಬಿಟ್ಟುಕೊಂಡ ಪಾಲಕ್ ಪೇಸ್ಟ್, ಉಪ್ಪು, ಗೋಡಂಬಿ ಪೇಸ್ಟ್, ಹುರಿದುಕೊಂಡ ಪನೀರ್ ಮತ್ತು ಅಗತ್ಯಕ್ಕೆ ನೀರು ಸೇರಿಸಿ. ಮುಚ್ಚಳ ಮುಚ್ಚಿ ೧೦ ನಿಮಿಷ ಬೇಯಿಸಿ. ಕುದಿಯುವಾಗ ಕಾಳು ಮೆಣಸನ್ನು ತರಿ ತರಿಯಾಗಿ ರುಬ್ಬಿಕೊಂಡು ಇದಕ್ಕೆ ಬೆರೆಸಿ. ಕೊನೆಯಲ್ಲಿ ಗರಂ ಮಸಾಲಾ, ಫ್ರೇಷ್ ಕ್ರೀಮ್ ಹಾಕಿದರೆ ಪನೀರ್ ಪೆಪ್ಪರ್ ಮಸಾಲಾ ರೆಡಿ.