ಪನೀರ್ ಟಿಕ್ಕಾ ಮಸಾಲ

ಬೇಕಾಗುವ ಸಾಮಗ್ರಿಗಳು

*ಕ್ಯೂಬ್ ಆಕಾರದಲ್ಲಿ ಕತ್ತರಿಸಿದ ಪನೀರ್ – ೨೦೦ ಗ್ರಾಂ
*ಟೊಮೆಟೊ – ೩
*ಈರುಳ್ಳಿ – ೩
*ದಪ್ಪ ಮೆಣಸಿನಕಾಯಿ -೩( ಕೆಂಪು,ಹಳದಿ,ಹಸಿರು,)
*ಗಟ್ಟಿ ಮೊಸರು – ೧ ಕಪ್
*ಕಸೂರಿ ಮೇಥಿ – ೧ ಟೀ ಸ್ಪೂನ್
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಟೀ ಸ್ಪೂನ್
*ಜೀರಿಗೆ – ೧ ಟೀ ಸ್ಪೂನ್
*ಜೀರಿಗೆ ಪುಡಿ- ೧ ಟೀ ಸ್ಪೂನ್
*ಅಚ್ಚಖಾರದ ಪುಡಿ – ೧ ಟೀ ಸ್ಪೂನ್
*ಗರಂ ಮಸಾಲ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಗೋಡಂಬಿ ಪೇಸ್ಟ್ – ೧/೨ ಕಪ್
*ಫ್ರೆಷ್ ಕ್ರೀಮ್ – ೧ ಕಪ್
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ನಿಂಬೆರಸ – ೧/೨ ಚಮಚ
*ಉಪ್ಪು ರುಚ್ಚಿಗೆ ತಕ್ಕಷ್ಟು

  • ಎಣ್ಣೆ

ಮಾಡುವ ವಿಧಾನ :

ಬೌಲ್‌ನಲ್ಲಿ ಗಟ್ಟಿ ಮೊಸರು, ಅಚ್ಚಖಾರದ ಪುಡಿ, ಗರಂ ಮಸಾಲ, ಕಸೂರಿ ಮೇಥಿ,ನ ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಪನೀರ್, ದಪ್ಪಗೆ ಹೆಚ್ಚಿದ ಈರುಳ್ಳಿ , ದಪ್ಪ ಮೆಣಸಿನಕಾಯಿ, ಟೊಮೆಟೊವನ್ನು ಸೇರಿಸಿ ಕಲಸಿ, ಕೆಲಕಾಲ ನೆನೆಸಿಡಿ. ಪನೀರ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಹಾಗೂ ಟೊಮೆಟೊಗಳನ್ನು ಒಂದೊಂದಾಗಿ ಒಂದು ಉದ್ದನೆಯ ಕಡ್ಡಿಗೆ ಚುಚ್ಚಿ. ಇದನ್ನು ಕಾದಿರುವ ಎಣ್ಣೆಯಲ್ಲಿ ಶ್ಯಾಲೋ ಫ್ರೈ ಮಾಡಿ. ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊವನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ. ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಗೋಡಂಬಿ ಪೇಸ್ಟ್ ಹಾಕಿ ಅಗತ್ಯಕ್ಕೆ ತಕ್ಕಷ್ಟು ಹುರಿದು ನೀರು ಹಾಕಿ ಕಲಸಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಫ್ರೆಷ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ. ಹುರಿದ ಟಿಕ್ಕಾ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆರಸ, ಕಸೂರಿ ಮೇಥಿ ಹಾಕಿ ಒಂದು ಕುದಿ ಬಂದ ನಂತರ ಒಲೆಯಿಂದ ಇಳಿಸಿದರೆ ಬಾಯಲ್ಲಿ ನೀರೂರಿಸುವ ಪನೀರ್ ಟಿಕ್ಕಾ ಮಸಾಲ ರೆಡಿ.