ಪದ್ಮ ಭೂಷಣ ಡಾ; ರಾಜ್‍ಕುಮಾರ್ ಜಯಂತಿ ಆಚರಣೆ

ಚಿತ್ರದುರ್ಗ,ಏ.೨೫: ಕರ್ನಾಟಕದ ಮೇರು ನಟ ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ; ರಾಜ್‍ಕುಮಾರ್ ಅವರ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಚರಿಸಲಾಯಿತು.ಕೋವಿಡ್ ಹಿನ್ನೆಲೆಯಲ್ಲಿ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ರಾಜ್‍ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವನ್ನು ಸಲ್ಲಿಸಲಾಯಿತು.
 ಸಹಾಯಕ ನಿರ್ದೇಶಕರಾದ ಧನಂಜಯ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್.ಲಕ್ಷ್ಮಣ್, ವಾರ್ತಾ ಇಲಾಖೆ ಸಿಬ್ಬಂದಿಗಳಾದ ತಿಪ್ಪಯ್ಯ, ಚಂದ್ರಶೇಖರ್, ಅಂಜನಮೂರ್ತಿ ಉಪಸ್ಥಿತರಿದ್ದರು.