ಪದ್ಮಿನಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ದೇವದುರ್ಗ.ಸೆ.೧೯- ಪಟ್ಟಣದ ಎಸ್‌ಎಂಎಸ್ ಇಂಟರ್ ನ್ಯಾಷನಲ್ ಶಾಲೆ ಶಿಕ್ಷಕಿ ಪದ್ಮಿನಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಶಿವಕುಮಾರ ಪಿ ಹರವಿಗೆ ಉತ್ತಮ ಆಡಳಿತ ಮಂಡಳಿ ಪ್ರಶಸ್ತಿ ಲಭಿಸಿದೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಇಚ್ಚೇಗೆ ನಡೆದ ರುಪ್ಸ್ ೨೦೨೦ ಕಾರ್ಯಕ್ರಮದಲ್ಲಿ ಈ ಇಬ್ಬರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರುಪ್ಸ ರಾಜ್ಯ ಅಧ್ಯಕ್ಷ ಡಾ.ಎಸ್.ಹಾಲನೂರು, ಕಾರ್ಯದರ್ಶಿ ಶಶಿಧರ್, ಶಿಕ್ಷಕರಾದ ಮೇಘಾ, ಜಯಶ್ರೀ, ಸ್ವಣಾಂಜಲಿ, ಶಬಾನಾ, ಸುನೀತಾ, ಸುಲೋಚನಾ, ನಿರ್ಮಲಾ, ಅನುಷಾ ಇದ್ದರು.