ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಆರೋಗ್ಯ ವಿಚಾರಿಸಿದ ಈಶ್ವರ ಖಂಡ್ರೆ

ಬೀದರ್, ಆ.11: ಮನೆಯಲ್ಲಿ ಜಾರಿ ಬಿದ್ದು ಬೆನ್ನುಮೂಳೆಗೆ ಪೆಟ್ಟುಬಿದ್ದು ಬೆಂಗಳೂರು ಜಯನಗರದ ಅಪೆÇಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶತಾಯುಷಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಸಾಲು ಮರದ ತಿಮ್ಮಕ್ಕ ಅವರನ್ನಿಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಸಾಕಿರುವ ಮಹಾತಾಯಿಯಾದ ನಿಮಗೆ ಇಡೀ ಕರುನಾಡಿನ ಜನರ ಅಷ್ಟೇ ಅಲ್ಲದೆ ವಿಶ್ವ ಪರಿಸರ ಪ್ರೇಮಿಗಳ ದಿವ್ಯ ಶುಭ ಹಾರೈಕೆ ಇದೆ. ನೀವು ಶೀಘ್ರ ಗುಣಮುಖರಾಗುತ್ತೀರಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀವು ಬೇಗ ಗುಣಮುಖರಾಗಿ ವೃಕ್ಷಪ್ರೇಮಿಗಳಿಗೆ ಮಾರ್ಗದರ್ಶನ ಮಾಡಬೇಕು, ಪ್ರೇರಣೆ ನೀಡಬೇಕು ಎಂದು ಹಾರೈಸಿದ್ದಾರೆ ಎಂದು ಈಶ್ವರ ಖಂಡ್ರೆ ಈ ಸಂದರ್ಭದಲ್ಲಿ ತಿಮ್ಮಕ್ಕ ಅವರಿಗೆ ತಿಳಿಸಿದರು.
ಆಸ್ಪತ್ರೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ತಿಮ್ಮಕ್ಕ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಈಶ್ವರ ಖಂಡ್ರೆ ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರಿಗೆ ತಿಳಿಸಿದರು.