ಪದ್ಮಶ್ರೀ ಪುರಸ್ಕøತ ಇಬ್ರಾಹಿಮ್ ಸುತಾರಗೆ ಸನ್ಮಾನ

ಬಾಗಲಕೋಟ, ಡಿ. 22 : ನಗರದ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಯುವಕ ಸಂಘ(ರಿ) ದ ವತಿಯಿಂದ ಕನ್ನಡದ ಕಬೀರ, ಭಾವೈಕ್ಯತೆಯ ಹರಿಕಾರ ಪದ್ಮಶ್ರೀ ಪುರಸ್ಕøತ ಶ್ರೀ ಇಬ್ರಾಹಿಮ್ ಸುತಾರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ವೇ.ಮೂ. ಪರಮಾನಂದಯ್ಯ ಷ. ಹಿರೇಮಠ, ಮಾತನಾಡುತ್ತ ಪದ್ಮಶ್ರೀ ಪುರಸ್ಕøತ ಇಬ್ರಾಹಿಮ್ ಸುತಾರ ಅವರು ನಮ್ಮ ಸಂಸ್ಥೆಗೆ ಬಂದಿದ್ದು ತುಂಬಾ ಸಂತಸ ತಂದಿದೆ ಹಾಗೂ ಇವರು ದೇಶ ವಿದೇಶಗಳಲಿ ಸಂಚರಿಸಿ ಎಲ್ಲ ಧರ್ಮಗಳು ಒಂದೇ ಎಂದು ಸಾರುವ ಮೂಲಕ ತಮ್ಮ ಪ್ರವಚನಗಳಿಂದ ಜನರಲ್ಲಿ ಭಾವೈಕ್ಯತೆಯ ಅರಿವು ಮೂಡಿಸುತ್ತಿದ್ದಾರೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕøತ ಇಬ್ರಾಹಿಮ್ ಸುತಾರ ಅವರು ಯುವಕರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಸಾಧನೆ ಮಾಡಬೇಕು ನಿಷ್ಠೆಯಿಂದ ಕರ್ತವ್ಯ ಮಾಡಿದ ಪ್ರತಿಫಲ ತಾವಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ವೀರಣ್ಣ ಹಿರೇಮಠ, ಪ್ರಭಾಕರ ಮಯಾಚಾರಿ, ಪುಟ್ಟು ಹಿರೇಮಠ, ಪಿ.ಆರ್. ಪ್ರಭುಕರ, ಈರಣ್ಣ ಕಟಗೇರಿ, ಮಧುಸೂದನ ಭಜಂತ್ರಿ ಬಸವರಾಜ ಗಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿ.ಜಿ. ಪಾಟೀಲ ಅವರು ಸ್ವಾಗತಿಸಿದರೆ, ನಬಿ ನದಾಫ ವಂದಿಸಿದರು.