ಪದ್ಮಭೂಷಣ ಉಸ್ತಾದ್ ರಸಿದ್ ಖಾನ್ ಗೆ ಶೃದ್ಧಾಂಜಲಿ

ಬೀದರ್:ಜ.11: ಪ್ರಗತಿ ಸಂಗೀತ ಕಲಾ ಸಂಸ್ಥೆ ಬೀದರ ವತಿಯಿಂದ ಬುಧವಾರ ಪದ್ಮ ಭೂಷಣ ಉಸ್ತಾದ್ ರಸಿದ್ ಖಾನ್ ರವರ ಶೃದ್ಧಾಂಜಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಕಿ ಕಲಾವಿದ ರಮೇಶ ಕೋಳಾರ್ ತಮ್ಮ ಗುರು ಪದ್ಮಭೂಷಣ ಉಸ್ತಾದ್ ರಶೀದ್ ಖಾನ್ ರವರನ್ನು ನೆನೆದು ಭಾವುಕರಾಗಿ “ನಮ್ಮ ಗುರುಗಳು ನಮ್ಮ ದೇಶದ ಆಸ್ತಿ, ಅವರ ಅಗಲಿಕೆಯಿಂದ ನನ್ನ ಮನಸ್ಸಿಗೆ ತುಂಬ ಆಘಾತ ಉಂಟಾಗಿದೆ. ಅವರು ಹಿಂದುಸ್ತಾನಿ ಶಸೀಯ ಸಂಗೀತ ದಿಗ್ಗಜರಲ್ಲಿ ಒಬ್ಬರಾಗಿದ್ದರು. ಇವರ ಧ್ವನಿ, ತಾನ, ಸರಗಂ, ರಾಗಗಳ ತುಲನೆ ಮಾಡುವ ಕ್ರಿಯೆ, ಅವರು ಹಾಡಿರುವ ಪ್ರತಿಯೊಂದು ರಾಗಗಳು ಕೇಳಬೇಕೆನಿಸುತ್ತಿದೆ. ಅಂತಹ ಗಾಯನ ಇಡಿ ವಿಶ್ವದಲ್ಲಿ ಯಾರದ್ದು ಇರಲಿಕ್ಕಿಲ್ಲ ಎಂದು ನನಗೆ ಅನಿಸುತ್ತಿದೆ. ಅವರ ಅಗಲಿಕೆ ಇಂದು ನನಗೆ ಎಲ್ಲವು ಶೂನ್ಯ ಏನಿಸುತ್ತಿದೆ” ಎಂದು ದುಖಃ ತೋಡಿಕೊಂಡರು.
ಕಲಾವಿದ ಶಿವರಾಜ ಕಾಳಶೆಟ್ಟಿ ಅವರು ಪದ್ಮಭೂಷಣ ಉಸ್ತಾದ್ ರಸಿದ್ ಖಾನ್ ರವರ ಜೀವನ ಚರಿತ್ರೆ, ಅವರ ಸಂಗೀತ ಸಾಧನೆ ಕುರಿತು ತಿಳಿಸಿದರು.
ರಾಗ ಸೊಹನಿ, ಮಾರ್ವಾ, ದರಬಾರಿ, ಕಿರವಾಣಿ, ಠುಮರಿಗಳು ಅವರ ಜನಪೀಯ ರಾಗಗಳಾಗಿದ್ದವು ಅವರು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಅವರಿಗೆ ಪದ್ಮಶ್ರೀ ಪಶಸ್ತಿ, ಸಂಗೀತ ನಾಟಕ ಅಕಾಡೇಮಿ, ಬಾಂಗ್ಲಾ ಭೂಷಣ ಮತ್ತು ಪದ್ಮ ಭೂಷಣ ಪಶಸಿಗಳು ಇನ್ನು ಅನೇಕ ಪಶಸ್ತಿಗಳು ಅವರು ಮುಡಿಗೇರಿಸಿಕೊಂಡಿದ್ದರು ಎಂದರು.
ಪ್ರಗತಿ ಸಂಗೀತ ಕಲಾ ಸಂಸ್ಥೆಯ ಎಲ್ಲಾ ಶಿಷ್ಯ ಬಳಗ, ತಬಲಾವಾದಕ ಅನೂಪ ಚಿದ್ರಿ ರ್ಮೋನಿಯಮ್ ವಾದಕ ಪ್ರವಿಣ, ಪುಟಾಣಿ ಕಲಾವಿದರ ಪೆÇೀಷಕರಾದ ಕಾರ್ತಿಕ ಮಠಪತಿ, ಶಿವಕುಮಾರ, ಸಿಮೋನ ಡಿಸೋಜಾ, ಜೈ ಪ್ರಕಾಶ ಮಿಶ್ರಾ, ಸಂಗೀತ ಶಿಕ್ಷಕಿ ತ್ರೀವೇಣಿ ಕೋಳಾರ, , ಕಾವ್ಯಶ್ರೀ ಸುತಾರ ಮತ್ತೀತರರು ಭಾಗವಹಿಸಿ ದಿಗ್ಗಜರಿಗೆ ಶೃದ್ಧಾಂಜಲಿ ಅರ್ಪಿಸಿ ಗೌರವ ಸಲ್ಲಿಸಿದರು.