ಪದೋನ್ನತಿ: ಬೀಳ್ಕೊಡುಗೆ

(ಸಂಜೆವಾಣಿ ವಾರ್ತೆ)
ನವಲಗುಂದ,ಅ10 : ತಾಲ್ಲೂಕಾ ಪಶುಆಸ್ಪತ್ರೆ ಸಹಾಯಕ ನಿರ್ದೇಶಕರ ಹುದ್ದೆಯಿಂದ ಹಾಸನ ಜಿಲ್ಲೆಯ ಉಪನಿರ್ದೇಶಕರು ಹುದ್ದೆಗೆ ಪದೋನ್ನತಿ ಹೊಂದಿದ ಡಾ. ರುದ್ರೇಶ್ ಕೊಟ್ಟೂರ್ ಅವರನ್ನು ಪಶುಆಸ್ಪತ್ರೆ ಅಧಿಕಾರಿಗಳು ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ರುದ್ರೇಶ್ ಕೋಟೂರ್ ಅವರು ನಮ್ಮ ಆಸ್ಪತ್ರೆಯ ಅಧಿಕಾರಿ ಬಳಗವು ಇಲ್ಲಿಯವರೆಗೆ ನನಗೆ ನೀಡಿದ ಸಹಕಾರಕ್ಕೆ ಹೃದಯ ಸ್ಪರ್ಶಿನಮಸ್ಕಾರಗಳು. ನಾನು ಈ ತಾಲ್ಲೂಕಿನ ಆಸ್ಪತ್ರೆಯಿಂದ ಭಾರವಾದ ಹೃದಯದಿಂದ ನಿರ್ಗಮಿಸುತ್ತಿರುವೆ, ತಾವುಗಳು ಇದುವರೆಗೂ ನೀಡಿದ ಸಹಕಾರಕ್ಕೆ ಚಿರಋಣಿಯಾಗಿದ್ದೇನೆ ಎಂದು ಭಾವುಕರಾದರು.
ಡಾ.ಸಂತೋಷ ಕರೀಬರಮ್ಮಣ್ಣವರ, ಡಾ. ಕಿರಣ್ ಕುಮಾರ, ಡಾ.ಬಸವರಾಜ್ ಕರೀಬರಮ್ಮಣ್ಣವರ, ಡಾ. ಸ್ಮಿತಾ ಪಟ್ಟೇಗೌಡ್ರ, ಎಚ್ ಬಿ ಸವಣೂರ, ಮೆಹಬೂಬಸಾಬ್ ಲಾಡಾಜಿ, ಮೌನೇಶ ಮರಚಪ್ಪನವರ, ಮಂಜುನಾಥ್ ಡೊಳ್ಳಿ, ಪ್ರವೀಣ್ ಮುತ್ತಣ್ಣನವರ ದೇವಪ್ಪ ಕೋಳಿವಾಡ, ಕೆ ಬಿ ಹೊಂಗಲ್, ಮುನ್ನಾ ಬಿಜಾಪುರ್ ಸೇರಿದಂತೆ ಪಶುಆಸ್ಪತ್ರೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.