
ಬೀದರಃಸೆ.08:ಬೀದರನಲ್ಲಿ ಪದೆ ಪದೆ ತೀವ್ರ ವಿದ್ಯುತೆ ಸಮಸ್ಯೆಯುಂಟಾಗುತ್ತಿದ್ದು, ಇದರಿಂದ ಸರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನೌಬಾದನ ಆಟೋನಗರದಲ್ಲಿರುವ ಸಣ್ಣ ಉದ್ಯಮಿಗಳು ಸುಮಾರು 500 ಕ್ಕೂ ಅಧಿಕ ವ್ಯಾಪಾರಸ್ಥರು ತೊಂದರೆ ಅನುಭವಿಸುತಿದ್ದಾರೆ. ವಿದ್ಯುತ್ ಇಲ್ಲದೆ ಯಾವುದೆ ಯಂತ್ರೋಪಕರಣಗಳು ಚಲಿಸುವುದಿಲ. ಹಾಗಾಗಿ ವಿದ್ಯುತ್ ಮೇಲೆಯೇ ನಿರ್ಭರ ಹೊಂದಿರುವ ಸಣ್ಣ ಉದ್ದಿಮೆದಾರರು ತಮ್ಮ ಕೆಲಸ-ಕಾರ್ಯಗಳನ್ನು ಮಾಡಲು ಅನಾನುಕೂಲವಾಗುತ್ತಿದೆ.
ಈ ಕುರಿತು ಈಗಾಗಲೆ ಬೀದರ ಜೇಸ್ಕಾಂನ ಕಾರ್ಯನಿರ್ವಹಕ ಅಭಿಯಂತರರ ಗಮನಕ್ಕೂ ತರಲಾಗಿದೆ. ಆದರೂ ಸಹ ಯಾವುದೆ ಪ್ರಯೋಜನವಾಗಿಲ್ಲ. ದಿನನಿತ್ಯ ಪದೆ ಪದೇ ವಿದ್ಯುತ್ ಸಮಸ್ಯೆ ಉದ್ಭವಿಸುತ್ತಲೇ ಇದೆ. ಆದಕಾರಣ ಇನ್ನು ಮುಂದಾದರೂ ವಿದ್ಯುತ್ ನಿರಂತರವಾಗಿ ನೀಡುವ ಮೂಲಕ ಸಾರ್ವಜನಿಕರಿಗೆ, ಸಣ್ಣ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಪದೆ ಪದೆ ವಿದ್ಯುತ್ ಸಮಸ್ಯೆಯುಂಟುಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ ಕಲಬುರಗಿಯವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಥ್ವಿರಾಜ್ ಎಸ್. ಕೋರಿದ್ದಾರೆ..