ಪದೇ ಪದೇ ಕರ್ತವ್ಯಕ್ಕೆ ಗೈರು – ಕಂದಾಯ ನಿರೀಕ್ಷಿಕ ಅಮಾನತು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.19 : – ಮೆಲಾಧಿಕಾರಿಗಳ ಅನುಮತಿ ಪಡೆಯದೆ ಪದೇ ಪದೇ ಕರ್ತವ್ಯಕ್ಕೆ ಅನಧಿಕೃತ ಗೈರಾದ ಆರೋಪದಲ್ಲಿ ತಾಲೂಕಿನ ಕಾನಾ ಹೊಸಹಳ್ಳಿ  ನಾಡಕಚೇರಿಯ ಕಂದಾಯ ನಿರೀಕ್ಷಕ ಬಿ ಮುರಳಿಕೃಷ್ಣ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಆದೇಶಿಸಿದ್ದಾರೆ.
ಕಂದಾಯ ನಿರೀಕ್ಷಿಕ ಬಿ.ಮುರಳಿ ಕೃಷ್ಣ ಅವರು 62 ದಿನ ಮೆಲಾಧಿಕಾರಿಗಳ ಪೂರ್ವನುಮತಿ ಪಡೆಯದೇ ಅನಧಿಕೃತ ಗೈರಾಗಿದ್ದಾರೆ, 30 ಜನವರಿ 2021 ರಿಂದ ಈವರೆಗೂ ಆಗಾಗ್ಗೆ ಅನುಮತಿ ಪಡೆಯದೇ ಕರ್ತವ್ಯ ಕ್ಕೆ ಗೈರಾಗಿದ್ದು ಈ ಸಂಬಂಧ ಅನಾರೋಗ್ಯದ ಕಾರಣ ಸಮಜಾಯಿಸಿ ನೀಡಿದ್ದಾರೆ.
ಪುನಃ ಅದೇ ರೀತಿಯಾಗಿ ಗೈರಾಗುವುದರ ಜತೆಗೆ ತಾವು ನಿರ್ವಹಿಸಿಸುವ ಅಭಿಲೇಖಲಾಯದ ಬೀಗದ ಕೀ ಯಾರಿಗೂ ಕೊಡದೆ ಫೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಕೂಡ್ಲಿಗಿ ತಹಶೀಲ್ದಾರ್ ರು ಜಿಲ್ಲಾಧಿಕಾರಿಗಳಿಗೆ ಶಿಸ್ತು ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.
ಬಿ.ಮುರಳಿಕೃಷ್ಣ ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957 ರ ನಿಯಮ 10(1)ಡಿ ಅನ್ವಯ ಶಿಸ್ತುಪಾಲನಾಧಿಕಾರಿಗಳೂ ಆದ ಜಿಲ್ಲಾದಿಕಾರಿಗಳು ಆದೇಶಿಸಿದ್ದಾರೆ.