ಪದೇ ಪದೆ ಕಷ್ಟಗಳು ಬಂದ ರೇ ಮಾತು ಮೌನವಾಗುತ್ತದೆ:ಟಿ ಹೆಚ್ ಎಂ


(ಸಂಜೆವಾಣಿ ವಾರ್ತೆ)
ಬಳ್ಳಾರಿ 30 :- ಪದೇ, ಪದೆ ಜೀವನದಲ್ಲಿ ತಾಪತ್ರಯಗಳು,  ಕಷ್ಟಗಳು ಬಂದರೆ ಮಾತುಗಳು ಮೌನವಾಗುತ್ತವೆಂದು ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಹೊಂಗಿರಣ ಸಭಾಂಗಣದಲ್ಲಿ ಇಲ್ಲಿನ ಇಂದಿರಾ ನಗರದ ಶ್ರೀನಿಧಿ ಕಲಾ ಟ್ರಸ್ಟ್  ಹಾಗು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ನೃತ್ಯ, ಸಂಗೀತ ಬದುಕಿಗೆ ಮುದವನ್ನು ನೀಡುತ್ತವೆ. ಅವು ಜೀವನದ ಅವಿಭಾಜ್ಯ ಅಂಗವಾಗಿರಬೇಕು,  ಜಾತಿ ಮೀರಿದ ಕಲೆಯೋ ಎಲ್ಲರನ್ನೂ ಒಗ್ಗೂಡಿಸುತ್ತದೆ.   ಕಲೆಗೆ ವರ್ಣಭೇದ, ವರ್ಗಭೇದ, ಮೇಲು, ಕೀಳು, ಶ್ರೀಮಂತ, ಬಡವ, ಆ ಜಾತಿ, ಈ ಜಾತಿ ಏನು ಇಲ್ಲ.  ಅದಕ್ಕಾಗಿ ಕಲೆಯನ್ನು ಎಲ್ಲರೂ ಉಳಿಸಿ ಬೆಳೆಸಬೇಕೆಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಶಿವಾಜಿ ರಾವ್ ಮಾತನಾಡಿದರು.
ಕಸಂ ಇಲಾಖೆ ಸಹಾಯಕ ನಿರ್ದೇಶಕ ಟಿ. ಹೊನ್ನೂರಪ್ಪ,  ಜಿ.ಎಸ್, ಮನೋಹರ್, ಕೆ. ಗಾಜಣ್ಣ, ಕೆ. ವೀರಬಸಪ್ಪ, ಬಿ. ಚಂದ್ರಶೇಖರ್, ಜಿ.ಕೆ. ರಾಮಕೃಷ್ಣ, ಜಿ.ಕೆ. ವಿಮಲಮ್ಮ, ಎಚ್. ಜಿ.ಸುಂಕಪ್ಪ, ಹೆಚ್. ವೀರೇಶ್,  ಜ್ಯೋತಿ ಪ್ರಕಾಶ್, ಮುದ್ದಟನೂರು ತಿಪ್ಪೇಸ್ವಾಮಿ,  ವೇದಿಕೆ ಮೇಲೆ ಇದ್ದರು.
ಅಧ್ಯಕ್ಷತೆ ವಹಿಸಿದ್ದ ಪೂರ್ವ ವಲಯ ಶಿಕ್ಷಣಾಧಿಕಾರಿ ಕೆ. ಎಸ್. ರಹಮಾನ್ ಶಾಲಾ ಕಾಲೇಜುಗಳಲ್ಲಿ ಎಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ವಿದ್ಯಾರ್ಥಿಗಳು ಕ್ರಿಯಾಶೀಲವಾಗುತ್ತಾರೆಂದರು.
ಶ್ರೀನಿಧಿ ಮತ್ತು ವೈಷ್ಣವಿ ತಂಡ ಇಂದಿರಾನಗರ ಇವರಿಂದ ಸಮೂಹ ನೃತ್ಯ ಹೆಚ್ಚು ತಿಮ್ಮಪ್ಪ ಬಿ.ಎಂ. ಸೂಗೂರು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು‌ ಶಿಕ್ಷಕ ಎರಿಸ್ವಾಮಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.