ಪದಾಧಿಕಾರಿಗಳ ಪದಗ್ರಹಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.24: ರೋಟರಿ ಕ್ಲಬ್ ಆಫ್ ಕಂಟೋನ್‍ಮೆಂಟ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಭಾನುವಾರ ನಗರದ ಗುರು ಕಾಲನಿಯ ರೋಟರಿ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಎನ್.ಚಂದ್ರಶೇಖರಗೌಡ ಹಾಗೂ ಕಾರ್ಯದರ್ಶಿಗಳಾಗಿ ಹೆಚ್.ವಿಷ್ಣುವರ್ಧನರೆಡ್ಡಿ ಅಧಿಕಾರ ಸ್ವೀಕರಿಸಿದರು.
ಪಿಡಿಜಿ ಬಿ.ಎಲ್.ಆನಂದರಾವು ಅವರು ಪದಗ್ರಹಣ ಮಾಡಿ ರೋಟರಿ ಕುರಿತಾಗಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರಾಮ್‍ಪ್ರಸಾದ್, ಕಾರ್ಯದರ್ಶಿ ಆನಂದ್‍ಕುಮಾರ್, ಹಿರಿಯ ರೋಟರಿಯನ್‍ರಾದ ಗುರು ಮ್ಯಾಥ್ಯೂ, ಶ್ರೀಧರ್, ಮಹಾರುದ್ರಗೌಡ, ಎಲ್‍ಎಂಎಲ್ ರಾಮಕೃಷ್ಣ, ಗುರುಮೂರ್ತಿ, ಸುಭಿ ಮ್ಯಾಥ್ಯೂ, ಡಾ. ಟಿ. ನಾರಾಯಣರಾವು, ಕೆ.ಕೋಟೇಶ್ವರಾವು ಮತ್ತು ರೋಟರಿ ಕ್ಲಬ್‍ನ ಸದಸ್ಯರು ಭಾಗವಹಿಸಿದ್ದರು.