ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಧಾರವಾಡ,ಏ5: ಬಿಜೆಪಿ ಯುವ ಮೋರ್ಚಾ ಧಾರವಾಡ 71, ನಗರ ಮಂಡಲದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿ ವಾರ್ಡಿನಿಂದ ಯುವ ಮೋರ್ಚಾ ತಂಡಗಳ ರಚನೆ ಮಾಡಿ ಯುವ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶಾಸಕರಾದ ಅಮೃತ ದೇಸಾಯಿ ಉದ್ಘಾಟನೆ ಮಾಡಿದರು. ಶಾಸಕರಾದ ಅಮೃತ್ ದೇಸಾಯಿ ಅವರು ಮಾತನಾಡಿ ಯುವ ನಾಯಕರೆ ಪಕ್ಷದ ಜೀವಾಳ, ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷ, ನಮ್ಮಲ್ಲಿ ನಾಯಕರಾಗುವುದು ನಮ್ಮ ಪಕ್ಷದ ಕಾರ್ಯಕರ್ತರೇ, ನಮ್ಮ ಯುವಮೋರ್ಚಾದ ಕಾರ್ಯಕರ್ತರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ದೇಶ ಮೊದಲು ಪಕ್ಷ ನಂತರ ನಾನು ಕೊನೆ ಈ ಧ್ಯೆಯೋದ್ದೇಶವನ್ನು ಮೈಗೂಡಿಸಿಕೊಂಡು ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನುಡಿದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಾಳಿಕಾಯಿ ಅವರು ಮಾತನಾಡಿ ದೇಶದ ಭದ್ರತೆಯ ವಿಷಯದಲ್ಲಿ ಮಾತನಾಡಿ ಸರ್ಜಿಕಲ್ ಸ್ಟ್ರೈಕ್ ನಂತಹ ಯೋಧರ ಸಾಹಸಗಳನ್ನು ದೇಶದ ವಿರೋಧಪಕ್ಷಗಳು ಅನುಮಾನಿಸಿ ದೇಶದ ಸೈನಿಕರಿಗೆ ಅಪಮಾನ ಮಾಡಿದರು ಎಂದರು, ಆಗ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಭಾರತದ ಪತಾಕೆಯನ್ನು ಹಾರಿಸಲೆಬೇಕೆಂದು ಇಚ್ಛೆಯೊಂದಿಗೆ ಪಣತೊಟ್ಟಿದ್ದ ಆ ಂiÀನಾಯಕರೇ ಪ್ರಧಾನಿ ನರೇಂದ್ರ ಮೋದಿ ಎಂದರು, ದೇಶಭಕ್ತಿಯನ್ನು ಪ್ರತಿಯೊಬ್ಬರ ನರನಾಡಿಗಳಲ್ಲಿ ತುಂಬುವ ಪಕ್ಷವೇ ಭಾರತೀಯ ಜನತಾ ಪಕ್ಷ ಎಂದು ಯುವಕರಿಗೆ ತಮ್ಮ ಸ್ಪೂರ್ತಿದಾಯಕ ನುಡಿಗಳನ್ನು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾದ ಈರೇಶ ಅಂಚಟಗೇರಿ, ಉಪಾಧ್ಯಕ್ಷರಾದ ಪ್ರಕಾಶ್ ಶೃಂಗೇರಿ, ಹಿರಿಯ ಮುಖಂಡರಾದ ಟಿ.ಎಸ್. ಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಹಪ್ಪಳಿ, ಕಾರ್ಯದರ್ಶಿಗಳಾದ ಸಿದ್ದು ಕಲ್ಯಾಣಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಂಜು ನೀರಲಕಟ್ಟಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಂಕರ್ ಶೆಳಕೆ ಹಾಗೂ ನಿರ್ಮಲ ಜವಳಿ, ಮಂಡಲದ ಯುವಮೋರ್ಚಾ ಉಸ್ತುವಾರಿ ಹಾಗೂ ಮಂಡಲದ ಉಪಾಧ್ಯಕ್ಷರು ಸುರೇಶ್ ಪಟ್ಟಣಶೆಟ್ಟಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕಿರಣ ಉಪ್ಪಾರ, ಪ್ರಧಾನ ಕಾರ್ಯದರ್ಶಿಗಳು ಶಿವಯ್ಯ ಹಿರೇಮಠ, ಸಂಗಮ ಹಂಜಿ,ಮಂಡಲ ಅಧ್ಯಕ್ಷರಾದ ಸುನಿಲ್ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಸ್ವಚ್ಛ ಭಾರತ ಜಿಲ್ಲಾ ಸಹ ಸಂಚಾಲಕ ಪ್ರಕಾಶ್ ಇಂಗಳಗಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮುತ್ತು ಬನ್ನೂರು ಮತ್ತು ವಿನಾಯಕ ಗೊಂದಳಿ,ಮಂಜು ಯರಗಟ್ಟಿ,ಸೂರಜ್ ಅಳಗವಾಡಿ ಸೇರಿದಂತೆ ಮಂಡಲದ ಯುವಮೋರ್ಚಾ ನೂತನ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.