ಪದಾಧಿಕಾರಿಗಳ ಆಯ್ಕೆ

ಲಕ್ಷ್ಮೇಶ್ವರ, ಜ6: ತಾಲೂಕ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿಯನ್ನು ರಚಿಸಲಾಗಿದ್ದು ಇತ್ತೀಚೆಗೆ ಪ್ರವಾಸಿ ಮಂದಿರದಲ್ಲಿ ಸೇರಿದ್ದ ಸದಸ್ಯರು ಅಧ್ಯಕ್ಷರನ್ನಾಗಿ ಸೋಮಣ್ಣ ಬೆಟಿಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ವೀರೇಂದ್ರ ಕಾಳಮ್ಮನವರ ಅವರನ್ನು ಆಯ್ಕೆ ಮಾಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಮೋಹನರಾವ್ ನಲವಡಿ ಅವರ ಆದೇಶದ ಮೇರೆಗೆ ಜಿಲ್ಲಾ ಸಂಘಟಕರು ಹಾಗೂ ಆರೋಗ್ಯ ಘಟಕದ ಕಾರ್ಯದರ್ಶಿ ನಿರಂಜನ್ ವಾಲಿಯವರ ಸಮ್ಮುಖದಲ್ಲಿ ಆಯ್ಕೆಯ ಪ್ರಕ್ರಿಯೆ ಜರುಗಿತ್ತು .
ಸಮಿತಿಯಲ್ಲಿ ಉಪಾಧ್ಯಕ್ಷರನ್ನಾಗಿ ಪದ್ಮರಾಜ ಪಾಟೀಲ್ ಸೇರಿದಂತೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
ನೂತನ ಅಧ್ಯಕ್ಷ ಸೋಮಣ್ಣ ಬೆಟಿಗೇರಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶೇಖಣ್ಣ ಕಾಳೆ, ಪದ್ಮರಾಜ ಪಾಟೀಲ್, ಪ್ರಕಾಶ್ ವಾಲಿ, ಅಣ್ಣಪ್ಪ ರಾಮಗಿರಿ, ನಿರಂಜನ ವಾಲಿ ಸೇರಿದಂತೆ ಅನೇಕರಿದ್ದರು.