ಪದಾಧಿಕಾರಿಗಳ ಆಯ್ಕೆ

(ಸಂಜೆವಾಣಿ ವಾರ್ತೆ)
ಕುಂದಗೋಳ ಫೆ. 12 : ರಾಜ್ಯ ಆದಿ ಜಾಂಬವ ಮಾದಿಗ ಸಮಿತಿ ಕುಂದಗೋಳ ಘಟಕದ ವತಿಯಿಂದ ಅಧ್ಯಕ್ಷ,, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ಪರಿವೀಕ್ಷಣಾ ಮಂದಿರದಲ್ಲಿ ಜರುಗಿತು.
ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಬಸವರಾಜ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಬಸವರಾಜ್ ಗುಡೇನಕಟ್ಟಿ,
ಪ್ರಧಾನ ಕಾರ್ಯದರ್ಶಿಯಾಗಿ. ಹೊಣ್ಣಪ್ಪ. ದೊಡ್ಡಮನಿ. ಸಹ ಕಾರ್ಯದರ್ಶಿಯಾಗಿ ಕಾಡಪ್ಪ ಮಾದರ, ಖಜಾಂಚಿ ಯಾಗಿ ಶ್ರಿಕಾಂತ ದೊಡ್ಡಮನಿ ಅವರು ಆಯ್ಕೆ ಆದರು.
ಸಭೆಯಲ್ಹಲಿ ಹನಮಂತಪ್ಪ ಮೇಲಿನಮನಿ, ಆಶೋಕ ಜೀಗಳೂರ, ಮಂಜು ಕೇಳಗೇರಿ,, ಕೋಟೆಪ್ಪ ಕೇಳಗೇರಿ, ಮಂಜು ಮಾದರ, ನಾಗಪ್ಸ ಹೊಸಮನಿ, ಗಣೇಶ ಮಾದರ, ಫಕ್ಕೀರಪ್ಪ ಮಾದರ , ಹನಮಂತಪ್ಪ ಸಣ್ಣಮನಿ, ಸೋಮು ಗುಗ್ಗರಿ,
ವಿ. ಬಿ ವಡಕ್ಕಣ್ಣವರ, ನೀಲಪ್ಪ ಮಾದರ, ಹನಮಂತಪ್ಪ ದೊಡಮನಿ ಹಾಗೂ ವಿವಿಧ ಗ್ರಾಮಗಳ ಗಣ್ಯರು ಉಪಸ್ಥಿತರಿದ್ದರು.