ಪದಾಧಿಕಾರಿಗಳ ಆಯ್ಕೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ನ7 : ತಾಲೂಕಿನ ಬಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪಾಲಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ರಾಜೇಶ್ ಶಂಕರಗೌಡ ಪಾಟೀಲ್ ಮತ್ತು ಉಪಾಧ್ಯಕ್ಷರಾಗಿ ರೇಖಾ ಫಕೀರೇಶ ದಂಡಣ್ಣವರ್ ಆಯ್ಕೆಯಾದರು.
ಇನ್ನುಳಿದಂತೆ ಸದಸ್ಯರುಗಳಾಗಿ ಮಾರುತಿ ದೊಡ್ಡಮನಿ, ಫಕೀರಪ್ಪ ಪೂಜಾರಿ, ಲಕ್ಷ್ಮಿ ದೊಡ್ಡಮನಿ, ಶೋಭಾ ದೊಡ್ಡಮನಿ, ರೇಣುಕಾ ದೊಡ್ಮನಿ, ಶರೀಫ್ ಸಾಬ್ ಸುಂಕದ, ಈರಣ್ಣ ಬಾರ್ಕೆರ್, ಕಲ್ಲಯ್ಯ ಹಿರೇಮಠ, ಚನ್ನಬಸಪ್ಪ ಗಾಣಿಗರ, ಪ್ರಕಾಶ ಕೊನಿಸಾಗರ, ಪರಮೇಶಪ್ಪ ಹತ್ತಾಳ, ಮೀನಾಕ್ಷಿ ತಳವಾರ, ನಿಂಗವ್ವ ಗಾಳಿ, ವೈದಾಬಾನು ಸುಂಕದ, ಹುಲಿಗೆಮ್ಮ ಸೊರಟೂರ, ಜ್ಯೋತಿ ಸೋನಾರ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಮುಖ್ಯೋಪಾಧ್ಯಾಯ ಬಿಜಿ ಕನವಳ್ಳಿ ತಿಳಿಸಿದ್ದಾರೆ.