ಪದಾಧಿಕಾರಿಗಳ ಆಯ್ಕೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಸೆ7: ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಪಂಚಲಿಂಗೇಶ್ವರ ಹಿರಿಯ ನಾಗರಿಕರ ವೇದಿಕೆಯ ಸಭೆ ಜರುಗಿತು.
ಶ್ರೀ ಚಂದ್ರಯ್ಯ ಸ್ವಾಮಿಗಳ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
ಮಾಜಿ ಅಧ್ಯಕ್ಷರಾದ ಐ.ಜಿ. ಚಂದರಗಿ ಅಧಿಕಾರವನ್ನು ಅರುಣಗೌಡ ಪಾಟೀಲ ಅವರಿಗೆ ಹಸ್ತಾಂತರಿಸಿದರು. ರಮೇಶ ಗೋಮಾಡಿ ಉಪಾಧ್ಯಕ್ಷ, ಯಲ್ಲನಗೌಡ ಶಾನಭೋಗ ಪ್ರಧಾನ ಕಾರ್ಯದರ್ಶಿ, ಮಹಾರುದ್ರಪ್ಪ ಬೋಳಿಶೆಟ್ಟಿ ಖಜಾಂಚಿ, ಮಲ್ಲಿಕಾರ್ಜುನ ಹಿರೇಮಠ ಸಂಘಟನಾ ಕಾರ್ಯದರ್ಶಿ, ವೆಂಕಣ್ಣಾ ಯಕ್ಕುಂಡಿ ಗೌರವ ಕಾರ್ಯದರ್ಶಿ, ಸಂಚಾಲಕರಾದ ಬಸವರಾಜ ದೇವಣಗಾಂವಿ, ಷಡಕ್ಷರಿ ಬಾಳಿ, ಮಲ್ಲಿಕಾರ್ಜುನ ಹಂಜಿ, ವೀರಣ್ಣ ಚಂದರಗಿ, ವೀರಣ್ಣ ಸಂಕಣ್ಣವರ, ಪದಾದಿಕಾರಿಗಳಾಗಿ ಆಯ್ಕೆಯಾದರು.
ಮಾಜಿ ಕಾರ್ಯದರ್ಶಿ ಐ.ಬಿ ಸಂಕಣ್ಣವರ ಆಯವ್ಯಯ ಪತ್ರಿಕೆ ಮಂಡಿಸಿದರು. ಎಚ್.ಬಿ.ಅಸೂಟಿ, ಹಿರಿಯ ನಾಗರಿಕರು ಇತರರು ಉಪಸ್ಥಿತರಿದ್ದರು.
ವಾಯ್.ಎಫ್. ಶಾನಭೋಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.