ಪದಾಧಿಕಾರಿಗಳ ಆಯ್ಕೆ

ಚನ್ನಮ್ಮನ ಕಿತ್ತೂರ,ಜು31: ವೈಜ್ಞಾನಿಕ ಸಂಶೋಧನಾ ಪರಿಷತ್ತ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಖನ್ನಿನಾಯ್ಕರ ಹೇಳಿದರು.
ಪಟ್ಟಣದ ವಿದ್ಯಾಗಿರಿಯಲ್ಲಿ ಪರಿಷತ್ತ ತಾಲೂಕಾ ಘಟಕದಿಂದ ಏರ್ಪಡಿಸಲಾಗಿದ್ದ ಒಂದನೇಯ ಸಭೆಯಲ್ಲಿ ನೂತನ ಪದಾಧಿಕಾರಿ ಆಯ್ಕೆ ಸಮಯದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಪರಿಷತ್ತು ಒಳ್ಳೆಯ ಕಾರ್ಯ ಮಾಡುತ್ತಾ ಬಂದಿದ್ದು. ತಾಲೂಕಾ ಮಟ್ಟದಲ್ಲಿ ಎಲ್ಲರೂ ಒಗ್ಗಟಿನಿಂದ ವೈಜ್ಞಾನಿಕ, ಪ್ರಾಯೋಗಿಕವಾಗಿ ನಿಜಾಂಶಗಳನ್ನು ತಿಳಿಹೇಳಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದರು.
ನೂತನ ತಾಲೂಕಾ ಘಟಕದ ಅಧ್ಯಕ್ಷರಾಗಿ ಹನಮಂತ ಲಂಗೋಟಿ, ಕೋಶಾಧ್ಯಕ್ಷರಾಗಿ ಲೇಖಕ ಪ್ರವೀಣ ಗಿರಿ, ಪ್ರಧಾನ ಕಾರ್ಯದರ್ಶಿ ನಾಗೇಶ ಬೆಣ್ಣಿ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ನಿವೃತ್ತ ಪ್ರಾಚಾರ್ಯ ಎಸ್.ವ್ಹಿ ದಳವಾಯಿ, ನಿವೃತ್ತ ಪ್ರಧಾನ ಗುರುಗಳು ಡಿ.ಆರ್. ಪಾಟೀಲ, ಬೈಲಹೊಂಗಲ ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ ಯರಗುದ್ದಿ, ಮಹೇಶ ಚನ್ನಂಗಿ, ಮಹೇಶ್ವರ ಹೊಂಗಲ, ಮಂಜುನಾಥ ಕಳಸಣ್ಣವರ, ಪ್ರಭಾವತಿ ಲದ್ದಿಮಠ ಇನ್ನಿತರಿದ್ದರು.