ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ,ನ19-ನಗರದ ನೀಲಿಜನ ರಸ್ತೆ ತಿರುಮಲ ಟ್ರೇಡ್ ಸೆಂಟರನಲ್ಲಿರುವ ಶ್ರೀ ಸಮರ್ಥ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಇದರ ಆಡಳಿತ ಮಂಡಳಿ ಚುನಾವಣೆಯು ಇತ್ತೀಚಿಗೆ ಜರುಗಿತು.
ಮುಂದಿನ 5 ವರ್ಷದ ಅವಧಿಗೆ ಜರುಗಿದ್ದು ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಜಯ ಡಿ. ಪೂಜಾರಿ, ಉಪಾಧ್ಯಕ್ಷರಾಗಿ ಸುಶೀಲಕುಮಾರ ಜೆ. ಕಾಟಕರ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ವಿನಯ ಗುತ್ತಲ,ವಿಕಾಸ ಕೋಟಿ, ಮಹಾಂತೇಶ ನೀಲಕಂಠನವರ, ಉಳವಪ್ಪ ಸುಣಗಾರ, ಚಂದ್ರಶೇಖರ ಪರದೇಶಿ, ವೀರಂದ್ರಗೌಡ ಪಾಟೀಲ, ದೇವರಾಜ ಇರಕಲ್ಲ, ಪುಷ್ಪಾ ದಾನಪ್ಪನವರ, ದಿವ್ಯಾ ಬೊಮ್ಮನಹಳ್ಳಿ ಇವರೆಲ್ಲರೂ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ ರೇಣಕಮ್ಮ ಎಮ್ ಅವರು ಘೋಷಣೆ ಮಾಡಿದ್ದಾರೆ.