ಪದಾಧಿಕಾರಿಗಳ ಅವಿರೋಧ ಆಯ್ಕೆ

ಬ್ಯಾಡಗಿ, ಏ 4: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮಹಿಳಾ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೇಮಾವತಿ ಎಂ ಎಲಿ ಹಾಗೂ ಉಪಾಧ್ಯಕ್ಷರಾಗಿ ಗೋಜವ್ವ ಸಿ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ ಹಿರೇಗೂಳಿ ತಿಳಿಸಿದ್ದಾರೆ.

ಸಂಘದ ಕಾರ್ಯದರ್ಶಿಯಾಗಿ ನಿರ್ಮಲಾ ಕರಮೂಡಿ, ನಿರ್ದೇಶಕರುಗಳಾಗಿ ಲೀಲಾವತಿ ಸಾತಣ್ಣನವರ, ಮುತ್ತಕ್ಕ ಪೂಜಾರ, ಗಂಗಮಾಳವ್ವ ಆನ್ವೇರಿ, ಮಮತಾ ಯತ್ನಳ್ಳಿ, ಮಂಜುಳಾ ಪಾಟೀಲ, ವನಜಾಕ್ಷಿ ಆಡಿನವರ, ರತ್ನಾ ಕಾಡಮ್ಮನವರ, ಅನಿತಾ ಮೊಟೆಬೆನ್ನೂರ, ಚನ್ನಬಸವ್ವ ಶಿಡೆನೂರು, ಶಕುಂತಲಾ ದಾನಣ್ಣನವರ, ಮಂಗಳಾ ಬೋವಿ, ರೇಣುಕಾ ಬ್ಯಾಡಗಿ ಹಾಗೂ ಚಿನ್ನಮ್ಮ ತಳವಾರ ಅವರುಗಳು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ವಿನೋದಾ ಪಾಟೀಲ, ಪಾರ್ವತಿ ಪಾಟೀಲ, ಶಾಂತಾ ಡಂಬಳ, ಕೆಂಚವ್ವ ಹವಳಣ್ಣನವರ, ಶೋಭಾ ರೋಣದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.