ಪದಾಧಿಕಾರಿಗಳಿಗೆ ಸನ್ಮಾನ


ಸಂಜೆವಾಣಿ ವಾರ್ತೆ
ಸಂಡೂರು: ಫೆ: 4: ಸಂಡೂರಿನ ವಾಸವಿ ಆರ್ಯವೈಶ್ಯ ಮುಕ್ತಿಧಾಮ ಟ್ರಸ್ಟ್ ನ ಪದಾಧಿಕಾರಿಗಳಿಗೆ ಸನ್ಮಾನವನ್ನು ಶ್ರೀ ಕ್ಷೇತ್ರ ಬೊಮ್ಮಾಘಟ್ಟೆಯಲ್ಲಿ ಶ್ರೀ ಹುಲಿಕುಂಟೇಶ್ವರ ರಥೋತ್ಸವದ ಪ್ರಯುಕ್ತ ಆರ್ಯವೈಶ್ಯ ಅನ್ನಸಂತರ್ಪಣಾ ಛತ್ರದ ಆವರಣದಲ್ಲಿ ಆರ್ಯವೈಶ್ಯ ಅನ್ನಸಂತರ್ಪಣೆ ಸಮಿತಿಯ ಅಧ್ಯಕ್ಷರಾದ ಎಸ್ ಪಿ ಭೀಮರಾಜ್ ಮತ್ತವರ ಕಾರ್ಯಕಾರಿ ಸಮಿತಿಯಿಂದ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಕರೋನಾ ಸಮಯವನ್ನೂ ಲೆಕ್ಕಿಸದೇ ಸೇವೆಯನ್ನು ಸಲ್ಲಿಸಿದ್ದಾರೆಂದು ಹೇಳುತ್ತಾ ಟ್ರಸ್ಟ್ ನ ವೈಸ್ ಛೇರ್ಮನ್ ರಾದ ವಿಷ್ಣು ಕುಮಾರ್ ಆರ್ ವಿ ವಕೀಲರು ಇವರಿಗೆ ಮತ್ತು ಟ್ರಸ್ಟೀ ಗಳಾದ ,  ಕೆವಿ ಸತ್ಯನಾರಾಯಣ, ಪಾಂಡುರಂಗ ಹಾಗೂ ಛೇರ್ಮನ್ ರ ಅನುಪಸ್ಥಿತಿಯಲ್ಲಿ ಕೆವಿ ರಾಜೇಶ್, ಆರ್ ವಿ ದತ್ತುರಾಜ್ ಇವರೆಲ್ಲರಿಗೂ ಇಂತದ್ದೇ ಸೇವೆಯನ್ನು ಪರಿಗಣಿಸಿ ದಾವಣಗೆರೆ ಯು ವಾಸವಿ ವೈಕುಂಠ ಸೇವಾ ಟ್ರಸ್ಟ್ ಪದಾಧಿಕಾರಿಗಳ ಜೊತೆಗೆ ಸನ್ಮಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ವೈಸ್ ಛೇರ್ಮನ್‍ರಾದ ವಿಷ್ಣು ಕುಮಾರ್ ಆರ್ ವಿ ವಕೀಲರು ಇವರು ಮಾತನಾಡಿ ಕರೋನಾ ಸಮಯವನ್ನು ಲೆಕ್ಕಿಸದೆ ನಮ್ಮ ಜೊತೆಯಲ್ಲಿ ಸೇವೆಗೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಮಾರ್ಗದರ್ಶಕರಾದ ಹಿರಿಯರಿಗೂ- ಆರ್ಯವೈಶ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತ ಅನ್ನಸಂತರ್ಪಣಾ ಕಾರ್ಯವು ರಾಜ್ಯ ಮತ್ತು ದೇಶಾದ್ಯಂತ ಹೆಸರಾಗಲಿ ಎನ್ನುತ್ತಾ ಈ ಸ್ಥಳದಲ್ಲಿ ಅಮೋಘವಾದ ಕಟ್ಟಡ ನಿರ್ಮಾಣ ಪ್ರಾರಂಭಿಸಲು ಅಣಿಯಾಗುವಂತೆ ಆರ್ಯವೈಶ್ಯರ ಸಮ್ಮುಖದಲ್ಲಿ ಕರೆ ನೀಡಿದ್ದಾರೆ