ಪದವೀಧರ ಮತದಾರರ ನೊಂದಣಿಯ ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಕೊಟ್ಟೂರು, ಅ.27: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ನವೆಂಬರ್ 1 2020 ಕ್ಕಿಂತ ಹಿಂದೆ ಪದವಿಯನ್ನು ಪೂರ್ಣಗೊಳಿಸಿದ ತಾಲೂಕಿನಲ್ಲಿರುವ ಪದವೀಧರ ಮತದಾರರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುವಂತೆ ಜಾಗೃತಿ ಜಾಥವನ್ನು ನಡೆಸಲಾಯಿತು.
 ನವೆಂಬರ್ 6  ಕೊನೆಯ ದಿನವಾಗಿದ್ದು, ಇಂದು ವಿಶೇಷ ನೊಂದಣಿ ಅಭಿಯಾನವಾಗಿರುತ್ತದೆ   ಕಾರಣ ಅರ್ಹ ಪದವೀಧರರು ನಮೂನೆ-18 ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪದವಿ ಮುಗಿಸಿದ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಎಪಿಕ್ ಕಾರ್ಡ್ ಗಳನ್ನು ದೃಢೀಕರಿಸಿ ಸಲ್ಲಿಸಲು ತಿಳಿಸಲಾಯಿತು.
ಜಾಥದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾದ ವೈ ರವಿಕುಮಾರ್,  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾರ ನಸರುಲ್ಲಾ , ಬಸವರಾಜ್, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಸ್ವೀಪ್ ಅಧಿಕಾರಿ ಶಶಿಧರ ಮೈದೂರು , ಅಜ್ಜಪ್ಪ ಸಿ, ಶಿವಕುಮಾರ್ ಡಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.