ಪದವಿ-ಸ್ನಾತಕೋತ್ತರ ಪರೀಕ್ಷೆ ವಿವೇಕಾನಂದಕ್ಕೆ ಮೂರು ಪ್ರಥಮ ರ್‍ಯಾಂಕ್

ಪುತ್ತೂರು, ಎ.೭- ಮಂಗಳೂರು ವಿಶ್ವವಿದ್ಯಾನಿಲಯದ ೨೦೨೦ ಸೆಪ್ಟೆಂಬರ್‌ನಲ್ಲಿ ನಡೆಸಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ  ಪುತ್ತೂರಿನ ವಿವೇಕಾನಂದ ಕಾಲೇಜ್ ಮೂರು ಪ್ರಥಮ ರ್‍ಯಾಂಕ್ ಪಡೆದುಕೊಂಡಿದೆ. 

ಬಿಎಸ್ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ಅನನ್ಯ ಪಾಂಗಳ್ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.  ೫೦೦೦ ಅಂಕದಲ್ಲಿ ಅವರು ೪೮೭೯ ಅಂಕಗಳನ್ನು ಪಡೆದಿದ್ದಾರೆ. ಅವರು ದಿನೇಶ್ ಪಾಂಗಳ್ ಹಾಗೂ ಸಂದ್ಯಾ ದಂಪತಿಗಳ ಪುತ್ರಿ.

ಎಂ.ಎ. ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ಸುಷ್ಮಾ ಎಂ.ಎಸ್. ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಸುಷ್ಮಾ ಅವರು ಎಂಸಿಜೆ ಪರೀಕ್ಷೆಯಲ್ಲಿ ಒಟ್ಟು ಗ್ರೇಡ್ ಪಾಯಿಂಟ್ ೧೦ರಲ್ಲಿ ೮.೦೭ ಅಂಕ ಗಳಿಸಿರುತ್ತಾರೆ. ಇವರಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ, ರಾಮಕೃಷ್ಣ ಮಲ್ಯ ಚಿನ್ನದ ಪದಕ, ಪಬ್ಲಿಕ್ ರಿಲೇಶನ್ ಸೊಸೈಟಿ ಆಫ್ ಇಂಡಿಯಾ ನಗದು ಬಹುಮಾನ ಹಾಗೂ  ದಕ್ಷಿಣ ಕನ್ನಡ ಮಕ್ಕಳ ಚಲನಚಿತ್ರೋತ್ಸವ ೧೯೮೮ ಬಹುಮಾನಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸದಾಶಿವ ಹಾಗೂ ಸವಿತಾ ದಂಪತಿಗಳ ಪುತ್ರಿ.

ಎಂ.ಎಸ್ಸಿ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನ ತೇಜಶ್ರೀ ಎಂ. ಅವರು ಫಸ್ಟ್ ರ್‍ಯಾಂಕ್ ಪಡೆದಿದ್ದಾರೆ.  ಅವರು ಎಂ.ಎಸ್ಸಿ. (ರಸಾಯನ ಶಾಸ್ತ್ರ) ಪರೀಕ್ಷೆಯಲ್ಲಿ ಒಟ್ಟು ಗ್ರೇಡ್ ಪಾಯಿಂಟ್ ೧೦ರಲ್ಲಿ ೮.೩೨ಅಂಕ ಪಡೆದು ಪ್ರಥಮ ರ್‍ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಅವರು ಪ್ರೊ. ಬಿ. ಶಿವರಾಮ ಹೊಳ್ಳ ಚಿನ್ನದ ಪದಕ, ಡಾ. ಎ.ಎಮ್. ಅಬ್ದುಲ್ ಖಾದರ್ ಚಿನ್ನದ ಪದಕ ಹಾಗೂ ಪ್ರೊ. ಎಂ. ಆರ್. ಗಜೇಂದ್ರಗಡ್ ನಗದು ಬಹುಮಾನಕ್ಕೂ ಆಯ್ಕೆಯಾಗಿದ್ದಾರೆ.  ಅವರು ಶ್ಯಾಮ ಪ್ರಸಾದ್ ಎಂ ಮತ್ತು ರಾಜೇಶ್ವರಿ ದಂಪತಿಗಳ ಪುತ್ರಿ.