ಪದವಿ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಲಿ

ಲಕ್ಷ್ಮೇಶ್ವರ, ಜು 11: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶನಿವಾರ ಪಿ.ಎಂ. ಬಳಿಗಾರ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯ ನರರೋಗ ತಜ್ಞರಾದ ಮೂಲತಃ ಶಿಗ್ಲಿ ಗ್ರಾಮದವರಾದ ಡಾ. ಎಸ್.ಪಿ. ಬಳಿಗಾರ ದಂಪತಿಗಳ ಪುತ್ರ ಡಾ. ಶುಶ್ರತ ಬಳಿಗಾರ, ಐ.ಎನ್.ಐ. ಸಂಸ್ಥೆಗಳ ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ಬೆಂಗಳೂರಿನ ನಿಮಾನ್ಸ್‍ನಲ್ಲಿ ಎಂಸಿಎಚ್ ಸೂಪರ್ ಸ್ಪೆಷಾಲಿಟಿಗೆ ಪ್ರವೇಶ ಪಡೆದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ. ಎ .ಎಸ್. ಕಿರಣಕುಮಾರ ಅವರು ಅನೇಕ ವಿದ್ಯಾವಂತರು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ವೈಯಕ್ತಿಕ ಬೆಳವಣಿಗೆಗೆ ಉಪಯೋಗಿಸುವವರೆ ಹೆಚ್ಚು. ಆದರೆ ಅದು ಸಮಾಜದ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಮಾಹಿತಿ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಆಕಾಶ, ಭೂಮಿ, ನೀರನ್ನು ಕೈವಶ ಮಾಡಿಕೊಂಡಿದ್ದ ವಿಜ್ಞಾನ, ಬಾಹ್ಯಾಕಾಶವನ್ನು ಹಿಡಿದಿಟ್ಟುಕೊಳ್ಳಲು ಅನೇಕ ಪ್ರಯತ್ನಗಳು ನಡೆದಿವೆ ಎಂದರು. ಇಂದು ಅನ್ಯಗ್ರಹಗಳ ಮೇಲೆ ವಾಸ ಮಾಡಲು ಮಾನವ ಪ್ರಯತ್ನಿಸುತ್ತಿರುವುದು ತಂತ್ರಜ್ಞಾನದ ಅಭೂತಪೂರ್ವ ಬೆಳೆವಣಿಗೆ ಎಂದರು. ಪ್ರತಿಭೆಗಳು ಪಲಾಯನ ಆಗದಂತೆ ಅವರಿಗೆ ಸರಿಯವಾಗಿ ಪೆÇ್ರೀತ್ಸಾಹ ನೀಡಬೇಕು ಎಂದರು.
ಸಾನಿಧ್ಯವಹಿಸಿದ್ದ ಶಿರಹಟ್ಟಿ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಪಾಲಕರು ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಅನೇಕ ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡದಿರುವುದರಿಂದ ಮುಂದಿನ ದಿನಮಾನಗಳಲ್ಲಿ ಅವರೇ ಕಂಟಕ ತರುತ್ತಾರೆ. ಆದ್ದರಿಂದ ಕೇವಲ ವಿದ್ಯಾವಂತರಾಗದೆ ಅವರಲ್ಲಿ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಡಾ. ಶುಶ್ರತ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಮನು ಬಳಿಗಾರ ವಹಿಸಿದ್ದರು. ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ, ಶಾಸಕರಾದ ಎಚ್.ಕೆ ಪಾಟೀಲ, ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರ ಮಠ, ರಾಮಕೃಷ್ಣ ದೊಡ್ಡಮನಿ, ಎಸ್‍ಎನ್ ಪಾಟೀಲ, ಟಿ. ಈಶ್ವರ್ ಮಾತನಾಡಿದರು. ಎಸ್.ಪಿ. ಬಳಿಗಾರ ಸ್ವಾಗತಿಸಿದರೆ, ಈಶ್ವರ ಮೆಡ್ಲೇರಿ, ಪ್ರವೀಣ ಹುಲಗೂರ, ರತ್ನಾ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.