ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

(ಸಂಜೆವಾಣಿ ವಾರ್ತೆ)
ನರೇಗಲ್ಲ,ಆ9: ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನುಕಲಿಯುವುದಲ್ಲ ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನವನ್ನು ಒಡಮೂಡಿಸುವದರೊಂದಿಗೆ ವರ್ತನೆ, ನಡುವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನ್ನಾಗಿ ನಿಜವಾದ ಶಿಕ್ಷಣದ ಗುರಿಯಾಗಬೇಕು. ಹೀಗಾಗಿ ವಿದ್ಯಾರ್ಥಿಗಳು ಕೇವಲ ಪದವಿ, ಅಂಕ ಮತ್ತು ಯಾವುದೇ ಶಿಕ್ಷಣ ಪಡೆದರೂ ಸಾಲದು. ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕೆಂದು ಕನ್ನಡ ಸಹಾಯಕ ಪ್ರಾಧ್ಯಾಪಕ ರಮೇಶ ಕಲ್ಲನಗೌಡರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 22-23 ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕ್ರೀಡಾ, ಎನ್ ಎಸ್ ಎಸ್, ಎನ್ ಸಿ ಸಿ, ರೇಂಜರ್ ರೋವರ್ಸ ಹಾಗೂ ಯುವ ರೆಡ್ ಕ್ರಾಸ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ಹಾಗೂ ಚಟುವಟಿಕೆಗಳಲ್ಲಿ ಪ್ರಥಮ ದ್ವಿತೀಯ ಸ್ಥಾನದಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.
ಭೂ ದಾನಿಗಳು ರಮೇಶ ಕಳಕೊಣ್ಣವರ, ಪ್ರಾಂಶುಪಾಲ ಈ ಆರ್ ಲಗಳೂರ, ಎಸ್ ಎಲ್ ಗುಳೇದಗುಡ್ಡ, ಎಸ್ ಪಿ ಕುರೇರ, ಅನೀಲಕುಮಾರ, ಕೆ.ಎಚ್. ಅಂಜನಮೂರ್ತಿ ,ಜ್ಯೋತಿ ಬೋಳಣ್ಣವರ, ಕೆ ಆರ್ ಪಾಟೀಲ, ಜಯಶ್ರೀ ಮುತಗಾರ, ಮುಂಜಿ, ನಸರೀನಬಾನು ಜಮಾದಾರ, ಕೆ ಎನ್ ಕಟ್ಟಿಮನಿ ,ವಿರೂಪಾಕ್ಷ ಸಂಗನಾಳ, ಪಿ ವಾಯ್ ಶಾಸ್ತ್ರಿ, ಎಂ ಎಪ್ ತಹಶಿಲ್ದಾರ, ವಿ ಸಿ ಇಲ್ಲೂರ ಇದ್ದರು.