
ರಾಯಚೂರು, ನ.೧೦- ಕಳೆದ ಮೇ ತಿಂಗಳ ನಡೆದ ಬಿಕಾಂ, ಬಿ.ಎಸ್.ಸಿ ಮತ್ತು ಬಿ.ಎ ಪದವೀಧರ ಫಲಿತಾಂಶ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
೨೦೨೩-೨೪- ಸಾಲಿನ ಮೇ ತಿಂಗಳಲ್ಲಿ ಪದವಿ ಪರೀಕ್ಷೆಗಳು ನಡೆಸಲಾಯಿತು. ಪರೀಕ್ಷೆ ಮುಕ್ತಾಯಗೊಂಡು ೫ ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗಿದೆ ಇರುವದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಅಭ್ಯಾಸಕ್ಕೆ ಹಿನ್ನೆಡೆಯಾಗುತ್ತದೆ.ಕೂಡಲೇ ಫಲಿತಾಂಶ ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡುವಂತೆ ಆಗ್ರಹಿಸಿದರು. ಪರೀಕ್ಷೆ ನಿಯಮನುಸಾರ ೬೦ ದಿನಗಳಲ್ಲಿ ಫಲಿತಾಂಶ ಪ್ರಕಟಿಸಬೇಕು. ಆದರೆ ರಾಯಚೂರು ವಿಶ್ವ ವಿದ್ಯಾಲಯ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬ ದೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ವಿಶ್ವವಿದ್ಯಾಲಯ ನಿರ್ಲಕ್ಷದಿಂದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ತೀವ್ರ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.
ಪ್ರಸ್ತುತ ೨ನೇ ಸೆಮಿಸ್ಟರ್ ಅಕ್ಟೋಬರ್ ೧೭ ರಿಂದ ನವೆಂಬರ್ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.ಇದೇ ರೀತಿಯಾಗಿ ತಡಮಾಡಿದರೆ ಮಕ್ಕಳ ಭವಿಷ್ಯ ದಾರಿ ತಪ್ಪುತ್ತದೆ. ರಾಯಚೂರು ವಿಶ್ವ ವಿದ್ಯಾಲಯ ೨ ಜಿಲ್ಲೆಗಳು ಯಾದಗಿರಿ ಮತ್ತು ರಾಯಚೂರು ಇದ್ದು, ವಿದ್ಯಾರ್ಥಿಗಳ ಫಲಿತಾಂಶ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ನಿರ್ಲಕ್ಷ ಮುಂದುವರಿದರೆ ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಂಬಣ್ಣ ಜಲ್ದಾರ್ ಈ. ಈರಣ್ಣ, ಗೋವಿಂದ ನಾಯಕ, ಪ್ರಭಾಕರ್ ವಕೀಲರು, ತಿಮ್ಮಪ್ಪ ಸ್ವಾಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.