ಪದವಿ ಪ್ರದಾನ, ಪ್ರತಿಭಾ ಪುರಸ್ಕಾರ

ಧಾರವಾಡ,ಜು30 : ಜಾಗತಿಕ ಮಟ್ಟದಲ್ಲಿ ಫ್ಯಾಷನ್ ಡಿಸೈನ್ ಭಾರತವನ್ನು ಉತ್ತುಂಗಕ್ಕೆ ಏರಿಸುತ್ತಿದೆ ಎಂದು ಧಾರವಾಡದಲ್ಲಿ ಐ ಎನ್ ಐ ಎಫ್ ಡಿ ಸಿಇಓ ಅನಿಲ ಖೋಸ್ಲಾ ತಿಳಿಸಿದರು.

ಧಾರವಾಡದ ಸಪ್ತಾಪುರದಲ್ಲಿ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಆಂಡ್ ಇಂಟೀರಿಯರ್ ಡಿಸೈನ್ ವತಿಯಿಂದ ಪದವಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಧಾರವಾಡದಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಆಂಡ್ ಇಂಟೀರಿಯರ್ ಡಿಸೈನ್ ಸಂಸ್ಥೆಯ ಕೆಲಸ ಪ್ರಮುಖವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐ ಎನ್ ಐ ಎಫ್ ಡಿ ಏರ್ಪಡಿಸಿದ್ದ ಲ್ಯಾಕಮಿ ಫ್ಯಾಷನ್ ವಿಕ್ ಭಾಗವಹಿಸಿದ್ದ ಹಾಗೂ ಐ ಎನ್ ಐ ಎಫ್ ಡಿ ಘಟಿಕೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಾಗರಾಜ ಮತ್ತಿಕಟ್ಟಿ, ವಸುಂಧರಾ ಶ್ರೀನಿವಾಸ ಮಾರಂ, ನಿಧಿ ಬಂಡ್ರಿ, ರಕ್ಷಾ ಮಾರಂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.