ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟ; ವಿಜೇತರಿಗೆ ಅಭಿನಂದನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೮; ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ದಾವಣಗೆರೆ ಸಪ್ತಗಿರಿ ಕಾಲೇಜಿನವರು ಅಯೋಜಿಸಿದ್ದು ಗುಂಪು ಆಟಗಳಲ್ಲಿ ಟೆನಿಸ್ ವಾಲಿಬಾಲ್ ಪಂದ್ಯಗಳನ್ನು ನಡೆಸಲು  ಎಸ್ ಕೆ ಎ ಎಚ್ ಮಿಲತ್ ಪದವಿ ಪೂರ್ವ ಕಾಲೇಜಿಗೆ ಜವಾಬ್ದಾರಿ ನೀಡಿದ್ದು ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲಾಯಿತು. ಇದರಲ್ಲಿ ಬಾಲಕರು ಮತ್ತು ಬಾಲಕಿಯರು ಭಾಗವಹಿಸಿದ್ದರು. ಬಾಲಕಿಯರ ವಿಭಾಗದಲ್ಲಿ ಎಸ್ ಕೆ ಎ ಎಚ್ ಮಿಲತ್ ಕಾಲೇಜ್ ಪ್ರಥಮ ಬಹುಮಾನ ಪಡೆದಿದೆ ದ್ವಿತೀಯ ಬಹುಮಾನ ಸಿದ್ದಗಂಗಾ ಪದವಿ ಪೂರ್ವ ಕಾಲೇಜ್  ಪಡೆದಿರುತ್ತಾರೆ. ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಸಿದ್ದಗಂಗಾ ಪದವಿ ಪೂರ್ವ ಕಾಲೇಜ್ ಪಡೆದಿರುತ್ತಾರೆ ದ್ವಿತೀಯ ಬಹುಮಾನ ಎಸ್ ಕೆ ಎಚ್ ಮಿಲತ್ ಕಾಲೇಜ್ ಪಡೆದಿದ್ದಾರೆ. ಟೆನ್ನಿಸ್ ಪಾಲಿಬಾಲ್ ಪಂದ್ಯದಲ್ಲಿ ಐಕ್ಯ ಪ್ರಕ್ರಿಯೆ ಎಂದು ಆಯ್ಕೆಯಾಗುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ರಾಜ್ಯಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆಟೆನ್ನಿಸ್ ವಾಲಿಬಾಲ್ ಪಂದ್ಯದಲ್ಲಿ ಗೆದ್ದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮಿಲತ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿರುವ ಸೈಯದ್ ಸೈಫುಲ್ಲಾ ಹಾಗೂ ಜಂಟಿ ಕಾರ್ಯದರ್ಶಿಗಳಾಗಿರುವ ಸೈಯದ್ ಖಾಲಿದ್ ಅಹಮದ್, ಆಡಳಿತ ಮಂಡಳಿ ಅಧಿಕಾರಿ ಸೈಯದ್ ಅಲಿ  ಮತ್ತು ಎಸ್ ಕೆ ಎ ಎಚ್ ಮಿಲ್ಲತ್ ಕಾಲೇಜಿನ ಪ್ರಾಂಶುಪಾಲರು ಡಾ. ಝುಲ್ಕರ್ ನೈನ್  ಹಾಗೂ ದೈಹಿಕ ಉಪನ್ಯಾಸಕರಾಗಿರುವ ರೋಷನ್ ಜಮೀರ್  ಶುಭ ಕೋರಿದ್ದಾರೆ.