ಪದವಿ ಪೂರ್ಣಗೊಳಿಸಿದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಿ: ತಹಸೀಲ್ದಾರ

ಸಂಜೆವಾಣಿ ವಾರ್ತೆಕಾರಟಗಿ ಅ:19: 2020ರ ನವಂಬರ್ 1ಕ್ಕಿಂತ ಒಳಗೆ ಪದವಿ ಪೂರ್ಣಗೊಳಿಸಿದವರು ನಮೂನೆ 18 ರ ಅರ್ಜಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ತಹಸಿಲ್‌ ಕಾರ್ಯಾಲಯದ ಸಂಬಂಧಪಟ್ಟ ವಿಭಾಗಕ್ಕೆ ಪದವೀಧರರು ಅರ್ಜಿ ಸಲ್ಲಿಸಬೇಕು ಎಂದು ತಹಸೀಲ್ದಾರರಾದ ಎಂ.ಕುಮಾರ ಸ್ವಾಮಿ ಅವರು ಹೇಳಿದರು. ಪಟ್ಟದ ಪುರಸಭಾ ಆವರಣದಲ್ಲಿ ತಾಲೂಕು ಸ್ವೀಪ್‌ ಸಮಿತಿಯಿಂದ ಬುಧವಾರದಂದು ಆಯೋಜಿಸಿದ್ದ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಕುರಿತು ಮತದಾರರ ವಿಶೇಷ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಪದವಿ ಪೂರ್ಣಗೊಳಿಸಿರುವ ಅಂಕಪಟ್ಟಿ, ಮತದಾರ ಗುರುತಿನ ಚೀಟಿ, ವಾಸಸ್ಥಳ, ಎರಡು ಭಾವಚಿತ್ರ, ಆಧಾರ್ ಪ್ರತಿ ದಾಖಲೆಗಳನ್ನು 6-11-2023ರೊಳಗೆ ಅರ್ಜಿ ಸಲ್ಲಿಸಬೇಕು. 2020ರ ನ.1ಕ್ಕಿಂತ ಮುಂಚೆ ಪದವಿ ಮುಗಿಸಿದವರೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದರು.ನಂತರ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್. ಅವರು ಮಾತನಾಡಿ ಪದವೀಧರ ಮತಕ್ಷೇತ್ರದ ಕುರಿತು ಮತದಾರರ ವಿಶೇಷ ನೋಂದಣಿ ಅಭಿಯಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ನೋಂದಣಿ ಪ್ರಕ್ರಿಯೆಯಿಂದ ಯಾರು ವಂಚಿತಗೊಳ್ಳಬಾರದು ಎಂದು ವಿವಿಧ ಕಾಲೇಜುಗಳಿಗೆ ಮೇಲ್ವಿಚಾರಕ ಅಧಿಕಾರಿಗಳ ತಂಡಗಳನ್ನು ನೇಮಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಜಾಗೃತಿ ಜಾಥಾ: ಪಟ್ಟಣದ ಪುರಸಭಾ ಕಾರ್ಯಾಲಯದಿಂದ ಪ್ರಾರಂಭವಾಗಿ ಕನಕದಾಸ ವೃತ್ತ ಹಾಗೂ ಬಸ್ ನಿಲ್ದಾಣ ತೆರಳಿ ಪದವಿ ಮುಗಿಸಿದವರು ಕಡ್ಡಾಯವಾಗಿ ನೋಂದಣಿ ಮಾಡಿಸುವಂತೆ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುರೇಶ್ , ಸಿದ್ದಾಪುರ ನಾಡ ಕಚೇರಿ ಉಪ ತಹಸೀಲ್ದಾರ್ ಪ್ರಕಾಶ ನಾಯಕ, ಸೇರಿದಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯತಿ , ಪುರಸಭಾ ಕಾರ್ಯಾಲಯ, ಪೋಲಿಸ್ ಇಲಾಖೆ ಇನ್ನಿತರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು,