
ಕಲಬುರಗಿ.ಏ 27: ಪದವಿ ಎನ್ ಇ ಪಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಅರ್ಧ ವರ್ಷ ಕಳೆದರೂ ಕೂಡ ಈಗಾಗಲೇ ನಡೆಯಬೇಕಿದ್ದ 3ನೇ ಸೇಮಿಸ್ಟರ್ ಪರೀಕ್ಷೆ ಇನ್ನು ನಡೆಸದೆ, ಹಲವಾರು ನೆಪಗಳನ್ನು ಒಡ್ಡಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಪದೇ-ಪದೇ ಪರೀಕ್ಷೆಗಳನ್ನು ಮುಂದೂಡುತ್ತಿರುವದು ಸಲ್ಲದು ಎಂದುಎಐಡಿಎಸ್ ಒ ಜಿಲ್ಲಾ ಸಮಿತಿ ತಿಳಿಸಿದೆ ಗುಲ್ಬರ್ಗಾ ವಿಶ್ವವಿದ್ಯಾಲಯವು ತರಾತುರಿಯಲ್ಲಿ ಜಾರಿ ಮಾಡಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯವು ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಕೂಡ ಪರೀಕ್ಷೆಗಳನ್ನುಮುಂದೂಡುತ್ತಿರುವುದು ಏತಕ್ಕಾಗಿ? ಗುಲ್ಬರ್ಗಾ ವಿಶ್ವವಿದ್ಯಾಲಯವು, ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳದೆ ಮುಂದಿನ ಶೈಕ್ಷಣಿಕ ವರ್ಷಕ್ಕೂ ಕೂಡ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾರ್ಯದರ್ಶಿತುಳಜಾರಾಮ ಎನ್ ಕೆ ಆಗ್ರಹಿಸಿದ್ದಾರೆ.