ಪದವಿ ದಿನ ಆಚರಣೆ

ಲಕ್ಷ್ಮೇಶ್ವರ,ಮೇ.28: ಪಟ್ಟಣದ ಶ್ರೀಮತಿ ಕಮಲ ಶ್ರೀ ವೆಂಕಪ್ಪ ಎಂ ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ದಿನವನ್ನು ಆಚರಿಸಲಾಯಿತು.
ಪದವಿ ದಿನ ಆಚರಣೆ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದಲ್ಲಿ ಪದವಿ ವಿದ್ಯಾರ್ಥಿಗಳ ಪಥ ಸಂಚಲನ ಜರಗಿತು ನಂತರ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧಾರವಾಡದ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಪೆÇ್ರಫೆಸರ್ ಸಾಗರ್ ಮನಗವಿಯವರು ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಅಚಲವಾದ ನಂಬಿಕೆ ಪ್ರಯತ್ನ ವಿಶ್ವಾಸ ಮನಸ್ಸನ್ನು ಕೇಂದ್ರೀಕರಿಸಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ.
ಪ್ರತಿಯೊಂದು ಹಣೆಬರಹ ದೈವ ಎಂಬ ನಂಬಿಕೆಯನ್ನು ಬಿಟ್ಟು ನಾವು ಮಾಡುವ ಕೆಲಸದ ಮೇಲೆ ವಿಶ್ವಾಸವಿಟ್ಟು ಮುನ್ನಡೆದಾಗ ಮಾತ್ರ ಒಂದು ಹಂತ ತಲುಪಲು ಸಾಧ್ಯ ಎಂದರು. ವಿದ್ಯೆ ವಿನಯದಿಂದ ಕೂಡಿರಬೇಕೆ ವಿನಹ ಗರ್ವದಿಂದಲ್ಲ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಾಗ ಹೆತ್ತ ತಂದೆ ತಾಯಿಗಳನ್ನು ಎಂದಿಗೂ ಮರೆಯಬಾರದು ಇಂದು ಅನಾಥಾಶ್ರಮಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವವರ ತಂದೆ-ತಾಯಿಗಳೇ ಇದ್ದಾರೆ ಆದರೆ ಗ್ರಾಮೀಣ ಪ್ರದೇಶದ ರೈತರು ಜೀವನದ ಕೊನೆ ಉಸಿರುವರೆಗೂ ಹೆತ್ತ ತಂದೆ ತಾಯಿಗಳನ್ನು ಜೋಪಾನ ಮಾಡುತ್ತಿರುವುದು ಇಂದು ನಾವು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದ ಲ್ಲಿ ಸಿವಿಲ್ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ಸ್ ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಪೂರ್ಣಗೊಳಿಸಿದ 316 ವಿದ್ಯಾರ್ಥಿಗಳಿಗೆ ಪ್ರಾಚ್ಯಾರ್ಯ ಡಾ. ಉದಯ್ ಕುಮಾರ್ ಹಂಪಣ್ಣವರ್ ಪದವಿ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಉದಯಕುಮಾರ್ ಹಂಪಣ್ಣನವರ್ ವಹಿಸಿದ್ದರು ವೇದಿಕೆ ಮೇಲೆ ಉಪ ಪ್ರಾಚಾರ್ಯ ಪರುಶುರಾಮ ಬಾರ್ಕಿ ಸುಭಾಷ್ ಮೇಟಿ ಎಸ್‍ಎಂ ಗೋಂದಕರ ಅರುಣ್ ತಂಡಿ ವಿಕ್ರಂ ಸಿಂಗ್ ಗೋಡ್ಬಾಲ್ ಸಂತೋಷ್ ಗುಜರಿ ಸನತ್ ಕುಮಾರ್ ಟಿಪಿ ರವಿಕುಮಾರ್ ಕೋರ್ಬಳ್ ದೇವೇಂದ್ರ ಕೆ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಕಾರ್ಯಕ್ರಮಕ್ಕೆ ಪದವಿ ಪಡೆದ ವಿದ್ಯಾರ್ಥಿಗಳ ಪಾಲಕರು ಸಾಕ್ಷಿಯಾಗಿ ಮಕ್ಕಳು ಪದವಿ ಪಡೆದಿದ್ದನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಸ್ವಪ್ನ ಚನಗೌಡರ ಕಾರ್ಯಕ್ರಮ ನಿರ್ವಹಿಸಿದರು.