ಪದವಿ ತರಗತಿಗೆ ಫೈಜ್ನಟ್ರಾಜ್ ಪದ್ಯ- ಪಠ್ಯ ವಾಗಿದೆ

ಚನ್ನಗಿರಿ.ಮಾ.30; ತಾಲೂಕಿನ ಸಂತೆಬೆನ್ನೂರು ಗ್ರಾಮದ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ ನಿಮ್ಮಂತೆ ನಾನೂ ಕೂಡಾ’ ಎನ್ನುವ ಸಾಮಾಜಿಕ ಕಳಕಳಿಯ ಪದ್ಯವೊಂದು ದಾವಣಗೆರೆ ವಿ.ವಿ.ಯ ಬಿಎಸ್ಸಿ, ಬಿಸಿಎ ನ ಸ್ನಾತಕ ಕನ್ನಡ ಭಾಷಾ ಪಠ್ಯ ನಾಲ್ಕನೇ ಚಾತುರ್ಮಾಸ ಕ್ಕೆ ಆಯ್ಕೆ ಮಾಡಲಾಗಿದೆ.೨೦೨೨-೨೨ ನೇ ನಂತರದ ಪಠ್ಯ ಇದಾಗಿದ್ದು ಇದರ ಪ್ರಧಾನ ಸಂಪಾದಕರು ಡಾ.ಮಲ್ಲಿಕಾರ್ಜುನ ಕೆ ಮತ್ತು ಸಂಪಾದಕರಾಗಿ  ಗಿರಿಸ್ವಾಮಿ .ಹೆಚ್ ಮತ್ತು ಡಾ. ಕಾವ್ಯಶ್ರೀ .ಜಿ ಕಾರ್ಯ ನಿರ್ವಹಿಸಿದ್ದಾರೆ.ಫೈಜ್ನಟ್ರಾಜ್ ಅವರ ಸಣ್ಣ ಕಥೆಯೊಂದು ಈಗಾಗಲೇ ಮಹಾರಾಷ್ಟ್ರ ಶಿಕ್ಷಣ ಇಲಾಖೆಯಲ್ಲಿ ಏಳನೆಯ ತರಗತಿಗೆ ಪಾಠವಾಗಿತ್ತು. ಇದೀಗ ದಾವಣಗೆರೆ ವಿ.ವಿ ಇವರ ಪದ್ಯ ಪದವಿಗೆ ಪಠ್ಯ ವಾಗಿ ಆರಿಸಿದೆ. ಇವರಿಗೆ ಕನ್ನಡ ಸಾಹಿತ್ಯ ಅಭಿಮಾನಿಗಳು, ಮಾಸದ ಮಾತು ಬಳಗ ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.