ಪದವಿ ಜೊತೆಗೆ ಮಾನಸಿಕ ದೈಹಿಕ ಶ್ರಮ ಅಗತ್ಯ- ಡಾ. ರಾಮಶೆಟ್ಟಿ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 17:  ಪಟ್ಟಣದ ಸಮೀಪದ ಕೃಷ್ಟಾನಗರದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಶಿಶುವಿಹಾರ (ಯುಕೆಜಿ) ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಮ್ಶೆಟ್ಟಿಯವರು ಅತಿಥಿಗಳಾಗಿ ಆಗಮಿಸಿ ಪದಿವ ಪ್ರಧಾನ ಮಾಡಿ ಮಾತನಾಡಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ದೈಹಿಕ ಮತ್ತು ಮಾನಸಿಕ ಶಿಕ್ಷಣವೂ ಬಹಳ ಮುಖ್ಯ ಎಂದು ಹೇಳಿದರು. ಅತಿಥಿಗಳಾದ ಡಾ.ಭರತ್‍ಕುಮಾರ್ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಕುಟುಂಬದ ಜೊತೆಗೆ ಶಾಲೆಯ ಪಾತ್ರವು ಬಹಳ ಮುಖ್ಯವಾದದ್ದು ಎಂದು ಹೇಳಿದರು.
ಹಲವಾರು ಸಾಂಸೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಶುವಿಹಾರ ಮತ್ತು ಐದನೆಯ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಾಚಾರ್ಯರಾದ ಮೋಹನ್ ರಾವ್, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
16 ಎಸ್ ಎ ಎನ್ 2
ಚಿತ್ರ: ಪಟ್ಟಣದ ಬಿ.ಕೆ.ಜಿ. ಗ್ಲೋಬಲ್ ಶಾಲೆಯಲ್ಲಿ ಶಿಶುವಿಹಾರ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಡಾ. ರಾಮಶೆಟ್ಟಿ ಪದವಿ ಪ್ರಧಾನ ಮಾಡಿದರು.