ಪದವಿ ಕಾಲೇಜು ಆರಂಭ: ನೀರಸ ಪ್ರತಿಕ್ರಿಯೆ


ಹರಪನಹಳ್ಳಿ.ನ.೧೮; ಪಟ್ಟಣದ ಗೋಸಾಯಿ ಗುಡ್ಡದ ಸಮೀಪ ಇರುವ ಟಿಎಂಎಇ ಸಂಸ್ಥೆಯ ಶಿಕ್ಷಣ ವಿದ್ಯಾಲಯದಲ್ಲಿ(ಬಿ.ಇಡಿ) ಅಂತಿಮ ವರ್ಷದಲ್ಲಿ ೮೦ ದಾಖಲಾತಿ ಇದ್ದು, ಕೇವಲ ೩ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು.

ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ವಿವಿಧ ವಿಭಾಗಗಳ ಅಂತಿಮ ವರ್ಷದ ೧೫ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ಕೋವಿಡ್ ಪರೀಕ್ಷೆ ಮಾಡಿಸದೇ ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ. ಬುಧವಾರದಿಂದ ಕಾಲೇಜಿನಲ್ಲಿಯೇ ಕೋವಿಡ್ ತಪಾಸಣಾ ಕೇಂದ್ರ ತೆರೆಯಲಾಗುವುದು ಎಂದು ಪ್ರಾಚಾರ್ಯ ಎಸ್. ಷಣ್ಮುಖನಗೌಡ ತಿಳಿಸಿದರು.ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಬ್ಬಂದಿ ಸೇರಿ ೬೧ ಮಂದಿ ಮಾತ್ರ ಕಾಲೇಜಿಗೆ ಬಂದಿದ್ದರು ಎಂದು ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ತಿಳಿಸಿದರು. ಬಂಕಾಪುರ ಚೆನ್ನಬಸಪ್ಪ ಸುಶೀಲಮ್ಮ ಪ್ರಥಮ ದರ್ಜೆ ಕಾಲೇಜು ಆರಂಭವಾಗಿದ್ದು, ಒಬ್ಬ ವಿದ್ಯಾರ್ಥಿಯೂ ಬಂದಿರಲಿಲ್ಲ.ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ವರದಿ ತರಲು ಹೇಳಿರುವಕಾರಣ, ಎರಡು ದಿನ ತಡವಾಗಿ ಬರಬಹುದು ಎಂದು ಕಾಲೇಜಿನ ಉಪನ್ಯಾಸಕರು
ನಿರೀಕ್ಷಿಸಿದ್ದಾರೆ. ?ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್, ಬಸ್‌ಪಾಸ್‌ನ ವ್ಯವಸ್ಥೆ ಇಲ್ಲದ ಕಾರಣ ಕಾಲೇಜಿಗೆ ಗೈರಾಗಿದ್ದಾರೆ? ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಮುಖಂಡ ಕೊಟ್ರಯ್ಯ ತಿಳಿಸಿದ್ದಾರೆ.