ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಲು ಆಗ್ರಹಿಸಿ ಮನವಿ

ಕಲಬುರಗಿ:ಏ.12: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಸರಕಾರಿ,ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜು ಅಧ್ಯಾಪಕರಿಗೆ ಬೇಸಿಗೆ ರಜೆ ನೀಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಲ್ಲಿ ಆಗ್ರಹಿಸುತ್ತದೆ.
ಕೋವಿಡೋತ್ತರ ಕಾಲಘಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ವ್ಯತ್ಯಾಸಗಳಾಗಿವೆ. ಆದರೆ ಆ ಶೈಕ್ಷಣಿಕ ವ್ಯವ್ಯಸ್ಥೆಯಲ್ಲಿ ಉಂಟಾದ ವ್ಯತ್ಯಾಸಗಳನ್ನು ಸರಿದೂಗಿಸಿಕೊಳ್ಳಲು ವಿಶ್ವವಿದ್ಯಾಲಯವು ಕೇವಲ ಅಧ್ಯಾಪಕರನ್ನೆ ಮಾತ್ರ ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯವು ತೀವ್ರವಾಗಿ ಕುಂಟಿತಗೊಳ್ಳುತ್ತಿದೆ.ಅಂದರೆ ಮಧ್ಯಂತರ ರಜೆ ಆಗಿರಬಹುದು ಅಥವಾ ಬೇಸಿಗೆ ರಜೆ ಆಗಿರಬಹುದು ಯಾವುದೇ ಪ್ರಕಾರದ ರಜೆಗಳು ಇಲ್ಲದಂತಾಗಿ ಅಧ್ಯಾಪಕರು ಮಾನಸಿಕ ಒತ್ತಡದಲ್ಲಿದ್ದಾರೆ. ಹೀಗಾಗಿ ಅಧ್ಯಾಪಕರ ಬೋಧನಾ ಸಾಮಥ್ರ್ಯ ಮತ್ತು ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಮ್ಮ ಅಧ್ಯಾಪಕರಿಗೆ ಬೇಸಿಗೆ ರಜೆಗಳನ್ನು ಆಯಾ ಸಮೆಸ್ಟರ್‍ಗಳ ಕೊನೆಯಲ್ಲಿ ಕೊಡಲಾಗಿದೆ.
ಆದರೆ ಗುಲಬರ್ಗಾ ವಿಶ್ವವಿದ್ಯಾಲಯವು ಮಾತ್ರ ಅಧ್ಯಾಪಕರಿಗೆ ಯಾವುದೇ ಪ್ರಕಾರದ ರಜೆ ಕೊಡದಿರುವುದು ಅನ್ಯಾಯದ ಕ್ರಮ ಅಷ್ಟೇ ಅಲ್ಲ ಅಸಾಂವಿಧಾನಿಕವಾಗಿದೆ. ಯಾವ ರೀತಿಯಾಗಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ತನ್ನ ಅಧ್ಯಾಪಕರಿಗೆ ಶೈಕ್ಷಣಿಕ ರಜೆಗಳನ್ನು ನಿರಂತರವಾಗಿ ನೀಡುತಾ ಬಂದಿದೆಯೋ ಅದೇ ರೀತಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಸಹ ಪದವಿ ಕಾಲೇಜು ಅಧ್ಯಾಪಕರಿಗೆ ದಿನಾಂಕ: 20.04.2024 ರಿಂದ 20.05.2024ರವರೆಗೆ ಅಂದರೆ ಒಂದು ತಿಂಗಳ ಕಾಲ ರಣಬಿಸಿಲಿನ ಪ್ರಯುಕ್ತ ಬೇಸಿಗೆ ರಜೆ ಮಂಜೂರು ಮಾಡಬೇಕೆಂದು ಅಧ್ಯಾಪಕರ ಸಂಘವು ಒತ್ತಾಯಿಸುತ್ತದೆ. ಏಕೆಂದರೆ ಸರಕಾರಿ ಕಾಲೇಜುಗಳ ಕಟ್ಟಡಗಳು ಈಗಾಗಲೇ ಚುನಾವಣೆಗಾಗಿ ಸರಕಾರ ಕಬ್ಜಾ ಮಾಡಿಕೊಂಡ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಹ ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಈಗಾಗಲೇ 2 ಮತ್ತು 4ನೇ ಸೆಮೆಸ್ಟರ್ ಪಠ್ಯಕ್ರಮವು ಸಹ ಪೂರ್ಣಗೊಳಿಸಲಾಗಿದೆ. ಹಾಗಾಗಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷೆ ವಿಭಾಗ ತಾಳಮೇಳವಿಲ್ಲದ ಪ್ರಯುಕ್ತ ಅಧ್ಯಾಪಕರ ವಿಶೇಷ ರಜೆಗಳು ಈಗಾಗಲೇ ಮುಗಿದಿರುತ್ತವೆ.ಹಾಗಾಗಿ ಆಯಾ ಕಾಲೇಜಿನ ಪ್ರಾಂಶುಪಾಲರು ಅಧ್ಯಾಪಕರನ್ನು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಕೈಗೊಳ್ಳುವುದಕ್ಕೆ ಹಲವಾರು ನಿರ್ಬಂಧಗಳನ್ನು ಹಾಕುತ್ತಿದ್ದಾರೆ. ಒಂದು ವೇಳೆ ಕಾಲೇಜು ಅಧ್ಯಾಪಕರಿಗೆ ರಜೆಯ ಅವಧಿಯ ಅಂತರವನ್ನು ಸರಿದೂಗಿಸಿಕೊಳ್ಳಲು ತಕ್ಷಣವೇ ‘ಗಳಿಕೆ ರಜೆ’ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂದರೆ ವಿಶ್ವವಿದ್ಯಾಲಯವು ಕ್ಯಾಲೆಂಡರ್ ಆಫ್ ಈವ್ಹೆಂಟ್‍ನ್ನು ಸಿದ್ದಪಡಿಸುವಾಗ ಕಡ್ಡಾಯವಾಗಿ ರಜೆ ಅವಧಿಯನ್ನು ನಿಗಧಿಗೋಳಿಸಬೇಕು. ಜೊತೆಗೆ ಕಳೆದ ಆರು ತಿಂಗಳಿಂದ ನೆನೆಗುದಿಗೆ ಬಿದ್ದಿರುವ ಮೌಲ್ಯಮಾಪನ ಮಾಡಿದ ಬಿಲ್ಲಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.ಆಯಾ ಕಾಲೇಜುಗಳಲ್ಲಿ ಸೆಮೆಸ್ಟರ್ ಪರೀಕ್ಷೆಗಳನ್ನು ನಡೆಸಲು ಮುಂಗಡ ಹಣ ನೀಡುವಲ್ಲಿ ಅನಗತ್ಯ ವಿಳಂಬ ಮಾಡಬಾರದು. ಹೀಗಾಗಿ ಅಧ್ಯಾಪಕರಿಗೆ ಪರೀಕ್ಷಾ ಮೌಲ್ಯಮಾಪನ ಭತ್ಯೆಯನ್ನು ಪಾವತಿಸುವಲ್ಲಿ ಹಾಗೂ ಕಾಲೇಜುಗಳಿಗೆ ಪರೀಕ್ಷಾ ಮುಂಗಡ ಹಣ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯನ್ನು ತಕ್ಷಣವೇ ಅಮಾನತ್ತು ಮಾಡಬೇಕೇಂದು ಅಧ್ಯಾಪಕರ ಸಂಘವು ಆಗ್ರಹಿಸುತ್ತದೆ. ಆದ್ದರಿಂದ ಈ ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯ ಹೆಚ್ಚಿಸಲು ಮತ್ತು ಬೋಧನಾ ದಕ್ಷತೆಯನ್ನು ವೃದ್ದಿಸಲು ಬೇಸಿಗೆ ರಜೆ ಮಂಜೂರು ಮಾಡಿ ಪದವಿ ಕಾಲೇಜು ಅಧ್ಯಾಪಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ ಕುಲಪತಿಗಳಲ್ಲಿ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತದೆ. ಮೌಲ್ಯಮಾಪನ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯ ಮೂಲಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ದಯಾನಂದ ಅಗಸರ ಅವರಿಗೆ ಮನವಿ ಸಲ್ಲಿಸಲಾಯಿತು.ಕುಲಸಚಿವರಾದ ಡಾ.ಮೇಧಾವಿನಿ ಕಟ್ಟಿ ಮತ್ತು ಹಣಕಾಸು ಅಧಿಕಾರಿಗಳಾದ ಕುಮಾರಿ ಗಾಯಿತ್ರಿ ಅವರು ಉಪಸ್ಥಿತರಿದ್ದರು.ಗುಲಬರ್ಗಾ ವಿಶ್ವವಿದ್ಯಾಲಯದ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ನೀಲಕಂಠ ಕಣ್ಣಿ,ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ.ಜಗನ್ನಾಥ ತಳವಾರ, ಪಂಡಿತ ಬಿ.ಕೆ, ಡಾ.ಶರಣಪ್ಪ ಗುಂಡಗುರ್ತಿ, ಡಾ.ಮಾರುತಿ ಮಾರಪಳ್ಳಿ, ಡಾ.ವೆಂಕಟೇಶ ಪೂಜಾರಿ,ಡಾಲಕ್ಷ್ಮಣ ಬೋಸ್ಲೆ, ಡಾ.ಅಂಬರಾಯ ಹಾಗರಗಿ,ಡಾ.ದಯಾನಂದ ಹಾಗೂ ನೂರಾರು ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.