ಪದವಿಯೊಂದಿಗೆ ವೃತ್ತಿ ಕೌಶಲ್ಯ ಕಲಿಯಬೇಕು

ರಾಯಚೂರು,ಮಾ.೦೧- ಪ್ರಸ್ತುತ ವಿದ್ಯಾರ್ಥಿಗಳು ಪದವಿಯೊಂದಿಗೆ ವೃತ್ತಿ ಕೌಶಲ್ಯಗಳನ್ನು ಕಲಿಯಬೇಕು. ಏಕೆಂದರೆ ಪ್ರಸ್ತುತ ಜಗತ್ತು ಸ್ಪರ್ಧಾತ್ಮಕವಾಗಿದೆ.
ಈ ಸ್ಪರ್ಧಾತ್ಮಕ ಲೋಕದಲ್ಲಿ ತಾವು ಗೆಲ್ಲಬೇಕಾದರೆ, ತಾವು ಪ್ರಸ್ತುತ ಇರುವ ಅನೇಕ ಕೌಶಲ್ಯಗಳನ್ನು ಕಲಿಯಬೇಕು. ಆಗ ಮಾತ್ರ ತಮಗೆ ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಗಳು ಸಿಗುತ್ತವೆ ಮತ್ತು ತಾವೆಲ್ಲರೂ ತಮ್ಮ ಭವಿಷ್ಯ ನಿರ್ಮಾಣಕ್ಕಾಗಿ ವೃತ್ತಿಪರ ಕೌಶಲ್ಯಗಳನ್ನು ಕಲಿಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕರಾದ ಡಾ.ಜೆ.ಎಲ್ ಈರಣ್ಣನವರು ಇಂದು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶ ಹಾಗೂ ಸೃಷ್ಟಿ ಇನ್ಫೋಟೆಕ್ ಕುಂದಾಪುರ ಇವರ ಸಹಯೋಗದಲ್ಲಿ ವೃತ್ತಿ ಕೌಶಲ್ಯಗಳ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೃಷ್ಟಿಯ ಸಂಸ್ಥೆಯ ತರಬೇತುದಾರರಾದ ಹರ್ಷವರ್ಧನ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ತಮ್ಮ ಕಲಿಕೆಯೊಂದಿಗೆ ಸಾಫ್ಟ್ ಸ್ಕಿಲ್ ಕಲಿತರೆ, ತಾವು ಒಳ್ಳೆಯ ಉದ್ಯೋಗ ಪಡೆಯುವುದಕ್ಕೆ ಅನುಕೂಲವಾಗುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಂಕಣ್ಣನವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲ ಉಪನ್ಯಾಸಕರು ತಮ್ಮ ಪಠ್ಯದೊಂದಿಗೆ ವೃತ್ತಿ ಕೌಶಲ್ಯದ ಬಗೆಯು ಮಾಹಿತಿ ನೀಡುತ್ತಾರೆ ಮತ್ತು ಅದರೊಂದಿಗೆ ವಿದ್ಯಾರ್ಥಿಗಳು ತಾವು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ತಮ್ಮ ಜೀವನದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾದ ಹರೀಶ್ ಕಾಂಚನ, ವಿಶ್ವನಾಥ್ ಅಕ್ಕರಿಕಿ, ಕಾಲೇಜಿನ ಐಕ್ಯೂ ಎಸಿ ಸಂಚಾಲಕರಾದ ಮಹಾಂತೇಶ ಅಂಗಡಿ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಮಹದೇವಪ್ಪ ಉಪನ್ಯಾಸಕರಾದ ಡಾ.ರವಿ ಹಾಗೂ ತರಬೇತುದಾರ ರಾದ ನಿರ್ಮಿತ ಕಾಂಚನ, ಶೇಷಮ್ಮ, ಈರಮ್ಮ ಮುಂತಾದವರು ಉಪಸ್ಥಿತರಿದ್ದರು.